ETV Bharat / state

ಲಾಕ್ ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡ ಎಸ್.ಡಬ್ಲ್ಯೂ. ಆರ್

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನೈರುತ್ಯ ರೈಲ್ವೆ ಇಲಾಖೆಗಳ ಪ್ರಧಾನ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ಅವರು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ‌‌ನ ಹೊಟಗಿ ಮತ್ತು ಗದಗ ನಡುವಿನ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ‌ನಡೆಸಿದರು.

SWR utilized lockdown period
ಎಸ್.ಡಬ್ಲ್ಯೂ. ಆರ್
author img

By

Published : Nov 7, 2020, 10:22 PM IST

ಹುಬ್ಬಳ್ಳಿ: ಲಾಕ್​ಡೌನ್ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ನೈಋತ್ಯ ರೈಲ್ವೆ ವಲಯ, ಹಲವಾರು ಜನಪರ ಕಾರ್ಯಗಳನ್ನು ತನ್ನ ಕೈಗೆತ್ತಿಕೊಂಡು ಸಾರ್ವಜನಿಕ ಸೇವೆಗೆ ಮುಂದಾಗಿದೆ. ಅದರಲ್ಲೂ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈಗ ತನ್ನ ಕಾರ್ಯವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನೈರುತ್ಯ ರೈಲ್ವೆ ಇಲಾಖೆಗಳ ಪ್ರಧಾನ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ಅವರು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ‌‌ನ ಹೊಟಗಿ ಮತ್ತು ಗದಗ ನಡುವಿನ ವಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ‌ನಡೆಸಿದರು. ಉದ್ದೇಶಿತ ದಿನಾಂಕಗಳಲ್ಲಿ ಅವುಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.

ಬಾದಾಮಿಯಿಂದ ಗದಗ ನಡುವೆ 110 ಕಿ.ಮೀ.ವರೆಗೆ ವೇಗದ ಪ್ರಯೋಗ

ಪ್ರಮುಖ ನಿರ್ವಹಣಾ ಕಾರ್ಯಗಳು ಇತ್ತೀಚೆಗೆ ಪೂರ್ಣಗೊಂಡಿರುವುದರಿಂದ ವಿಭಾಗೀಯ ಚಾಲನೆಯಲ್ಲಿರುವ ವೇಗವನ್ನು ಹೆಚ್ಚಿಸಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ತಪಾಸಣೆಯ ಸಮಯದಲ್ಲಿ ಬಾದಾಮಿಯಿಂದ ಗದಗ ನಡುವೆ 110 ಕಿ.ಮೀ.ವರೆಗೆ ವೇಗದ ಪ್ರಯೋಗ ನಡೆಸಲಾಯಿತು.

ಇಂಡಿ ರಸ್ತೆ, ವಿಜಯಪುರ, ಆಲಮಟ್ಟಿ, ಬಾದಾಮಿ, ಬಾಗಲಕೋಟೆ ನಿಲ್ದಾಣಗಳನ್ನು ವೀಕ್ಷಿಸಿದ ಬಳಿಕ ಕೂಡಗಿ ಕಾಲುವೆ ದಾಟುವಿಕೆ ಮತ್ತು ವಿಜಯಪುರ ಸರಕುಗಳ ಶೆಡ್ ಸ್ಥಳಾಂತರಿಸಲು ಯೋಜಿಸಲಾಗಿರುವ ಅಲಿಯಾಬಾದ್‌ನ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.