ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಸ್ವಾಮೀಜಿಯೊಬ್ಬರು ಬೆತ್ತಲಾಗಿ ಮಲಗಿರುವ ಘಟನೆ ಕುಸಗಲ್ ರಸ್ತೆಯ ಆಶ್ರಮವೊಂದರಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾ ಹಿನ್ನೆಲೆ ಇಷ್ಟು ದಿನಗಳ ಕಾಲ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ತಡ ಸ್ವಾಮೀಜಿಯೊಬ್ಬರು ಕಂಠಪೂರ್ತಿ ಕುಡಿದು ಬೆತ್ತಲಾಗಿ ಮಲಗಿದ್ದಾರೆ.
ಬೆಳಗ್ಗೆ ಮಠಕ್ಕೆ ಭಕ್ತರು ಬಂದಾಗ ಸ್ವಾಮಿಯ ರಹಸ್ಯ ಬೆಳಕಿಗೆ ಬಂದಿದೆ. ಕಂಠಪೂರ್ತಿ ಕುಡಿದು ಆಶ್ರಮದಲ್ಲಿ ಬೆತ್ತಲಾಗಿ ಮಲಗುವ ಮೂಲಕ ಸಿಕ್ಕಿಬಿದ್ದಿದ್ದಾರೆ. ಸ್ವಾಮೀಜಿ ಪ್ರತಿ ವರ್ಷ ನೂರಾರು ಜನರಿಗೆ ಮಾಲಾ ದೀಕ್ಷೆ ನೀಡುತ್ತಿದ್ದರಂತೆ.