ಧಾರವಾಡ: ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಪೊಲೀಸ್ ಠಾಣೆಗೆ ಪಲ್ಸ್ ಆಕ್ಸಿಮೀಟರ್ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಿರುದ್ಧದ ಹೋರಾಟದೊಂದಿಗೆ ನಮ್ಮ ಪೊಲೀಸರು ಕೆಲಸ ಮಾಡಬೇಕಿದೆ. ಹೀಗಾಗಿ ಪ್ರತಿ ಠಾಣೆಗೆ ಪಲ್ಸ್ ಆಕ್ಸಿಮೀಟರ್ ಕೊಟ್ಟಿದ್ದೇವೆ. ಕೊರೊನಾ ಲಕ್ಷಣ ಇಲ್ಲದವರ ಪತ್ತೆಗೆ ಈ ವ್ಯವಸ್ಥೆ ನೀಡಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ತೆಗೆಯಬೇಕು.
ಈಗಾಗಲೇ ನಮ್ಮಲ್ಲಿ 8 ಸಿಬ್ಬಂದಿಗೆ ಕೊರೊನಾ ಧೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ನಮ್ಮೊಂದಿಗೆ ಕರ್ತವ್ಯ ನಿರ್ವಹಿಸಿದ್ದ ಓರ್ವ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಇದರಿಂದ ನಾನೂ ಸಹ ಕ್ವಾರಂಟೈನ್ನಲ್ಲಿದ್ದೆ. ಬಳಿಕ ಎಲ್ಲರು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ ಎಂದರು.