ಹುಬ್ಬಳ್ಳಿ: ನಗರದ ಸಿಬಿಟಿ, ಗದಗ ರಸ್ತೆ, ದುರ್ಗದಬೈಲ, ಹೊಸೂರ, ಚಾಣಕ್ಯಪುರಿ ಮತ್ತಿತರ ಪ್ರದೇಶಗಳಲ್ಲಿ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಂಚರಿಸಿ ರವಿವಾರದ ಲಾಕ್ ಡೌನ್ ಪರಿಶೀಲಿಸಿದರು.
ಬಳಿಕ, ಸರ್ಕ್ಯೂಟ್ ಹೌಸ್‌ನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಚರ್ಚಿಸಿ, ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.