ಧಾರವಾಡ: ನವಲಗುಂದ ತಾಲೂಕಿನ ಪಡೆಸೂರ ಗ್ರಾಮದ ಇಬ್ಬರು ಹೋರಾಟಗಾರರಿಗೆ ನವಲಗುಂದ ಜೆಎಂಎಫ್‌ಸಿ ಕೋರ್ಟ್ನಿಂದ ಸಮನ್ಸ್ ಬಂದಿದೆ. ರಮೇಶ ನವಲಗುಂದ ಹಾಗೂ ಶಿವಾನಂದ ಅಂಗಡಿ ಎಂಬ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿದ್ದು, 2015ರಲ್ಲಿ ಮಹದಾಯಿ ನೀರಿಗಾಗಿ ಹೋರಾಟ ಮಾಡಿದ್ದರು.
![ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ಜಾರಿ](https://etvbharatimages.akamaized.net/etvbharat/prod-images/kn-dwd-1-mahadayi-samanas-jari-av-ka10001_06122021104152_0612f_1638767512_857.jpg)
ಡಿಸೆಂಬರ್ 7 ರಂದು(ನಾಳೆ) ಕೊರ್ಟ್ಗೆ ಹಾಜರಾಗಲು ಸೂಚಿಸಲಾಗಿದೆ. ಈ ಹಿಂದೆ ಸರ್ಕಾರ ಎಲ್ಲಾ ಮಹದಾಯಿ ಹೋರಾಟಗಾರರ ಕೇಸ್ ವಾಪಸ್ ಪಡೆದ ಬಗ್ಗೆ ಹೇಳಿತ್ತು. ಆದರೆ ಈಗಲೂ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿರುವುದು ಹೋರಾಟಗಾರರಲ್ಲಿ ಆತಂಕ ಮೂಡಿಸಿದೆ.