ETV Bharat / state

ಬಿಹಾರದಲ್ಲಿ ಮೆದುಳು ಜ್ವರದಿಂದ 170ಕ್ಕೂ ಹೆಚ್ಚು ಮಕ್ಕಳ‌ ಸಾವು ಖಂಡಿಸಿ ಪ್ರತಿಭಟನೆ - undefined

ಬಿಹಾರದಲ್ಲಿ ಮೆದುಳು ಜ್ವರದಿಂದ ಮಕ್ಕಳ ಸಾವು ದೇಶದಲ್ಲೇ ಸದ್ದು ಮಾಡುತ್ತಿದೆ. ಈ ಮಕ್ಕಳ ಸಾವಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷ ಧರಣಿ ನಡೆಸಿದೆ.

ಪ್ರತಿಭಟನೆ
author img

By

Published : Jun 25, 2019, 5:44 PM IST

ಧಾರವಾಡ: ಬಿಹಾರದಲ್ಲಿ ಮೆದುಳು ಜ್ವರದಿಂದ 170ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿ ನಗರದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಹಾರದ ಮುಜಾಫರ್‌ಪುರ ಜಿಲ್ಲೆಯೊಂದರಲ್ಲೇ 170ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಸಾವನ್ನಪ್ಪಿರುವುದು ಅತ್ಯಂತ ವಿಷಾದಕರ ಸಂಗತಿ. ಬಿಹಾರ ರಾಜ್ಯದಲ್ಲಿ ಇದುವರೆಗೆ ಇಂತಹ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಗಾಬರಿ ಹುಟ್ಟಿಸುವಂತಹ ವಿಷಯ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಇದು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಹಾರದಲ್ಲಿ ಮೆದುಳು ಜ್ವರದಿಂದ ಮಕ್ಕಳ ಸಾವು ಖಂಡಿಸಿ ಪ್ರತಿಭಟನೆ

ಸರ್ಕಾರಿ ಆಡಳಿತ ವ್ಯವಸ್ಥೆ ಚುನಾವಣಾ ತಯಾರಿಯಲ್ಲಿ ಮುಳುಗಿ ಈ ಕಾಯಿಲೆಯನ್ನು ಎದುರಿಸಲು ಸನ್ನದ್ಧರಾಗದಿರುವುದೇ ಈ ದುರಂತಕ್ಕೆ ಕಾರಣ ಎಂಬ ಮಾತು ಬಿಹಾರದಲ್ಲಿ ಕೇಳಿ ಬರುತ್ತಿದೆ. ಅವಶ್ಯವಿರುವಷ್ಟು ವೈದ್ಯರು, ಔಷಧಿಗಳು, ದಾದಿಯರು ಮೊದಲಾದ ಕೊರತೆಗಳನ್ನು ಆಸ್ಪತ್ರೆಗಳಲ್ಲಿ ಸರಿಪಡಿಸದೆ ಇರುವುದೇ ಇಂತಹ ವಿಪತ್ತಿಗೆ ಕಾರಣವಾಗಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಮಿದುಳಿನ ಉರಿಯೂತದ ಸಮಸ್ಯೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಜೀವ ಉಳಿಸುವುದು ಸಾಧ್ಯವಿದೆಯಾದರೂ ಅಂತಹ ಸೌಲಭ್ಯಗಳು ಲಭ್ಯವಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಡಲು ಕಾರಣವಾದ ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ಇಂತಹ ದಿವ್ಯ ನಿರ್ಲಕ್ಷ್ಯವನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.

Intro:ಧಾರವಾಡ: ಬಿಹಾರದಲ್ಲಿ ಮೆದುಳು ಜ್ವರದಿಂದ ೧೭೦ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿ ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಕರೆಯ ಮೇರೆಗೆ ನಗರದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ-ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಹಾರದ ಮುಜಾಫರ್‌ಪುರ ಜಿಲ್ಲೆಯೊಂದರಲ್ಲೇ ೧೭೦ಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಮೆದುಳಿನ ಉರಿಯೂತ ಕಾಯಿಲೆಯಿಂದ ಸಾವನ್ನಪ್ಪಿರುವುದು ಅತ್ಯಂತ ವಿಷಾದಕರ ಸಂಗತಿ. ಬಿಹಾರ ರಾಜ್ಯದಲ್ಲಿ ಇದುವರೆಗೆ ಇಂತಹ ೬೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಗಾಬರಿ ಹುಟ್ಟಿಸುವಂತಹ ವಿಷಯ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಇಂತಹ ಸಂಪೂರ್ಣ ವೈಫಲ್ಯವನ್ನು ಇದು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರಿ ಆಡಳಿತ ವ್ಯವಸ್ಥೆ ಚುನಾವಣಾ ತಯಾರಿಯಲ್ಲಿ ಮುಳುಗಿ ಈ ಕಾಯಿಲೆಯನ್ನು ಎದುರಿಸಲು ಸನ್ನದ್ಧರಾಗದಿರುವುದೇ ಈ ದುರಂತಕ್ಕೆ ಕಾರಣ ಎಂಬ ಮಾತು ಬಿಹಾರದಲ್ಲಿ ಕೇಳಿ ಬರುತ್ತಿದೆ. ಅವಶ್ಯಕವಿರುವಷ್ಟು ವೈದ್ಯರು, ಔಷಧಿಗಳು, ದಾದಿಯರು ಮೊದಲಾದ ಕೊರತೆಗಳನ್ನು ಆಸ್ಪತ್ರೆಗಳಲ್ಲಿ ಸರಿಪಡಿಸದೆ ಇರುವುದೇ ಇಂತಹ ವಿಪತ್ತಿಗೆ ಕಾರಣವಾಗಿದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ಮಿದುಳಿನ ಉರಿಯೂತದ ಸಮಸ್ಯೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆಯನ್ನು ಕೊಟ್ಟು ಜೀವ ಉಳಿಸುವುದು ಸಾಧ್ಯವಿದೆಯಾದರೂ ಅಂತಹ ಸೌಲಭ್ಯಗಳು ಲಭ್ಯವಿಲ್ಲ. ಆರೋಗ್ಯ ವ್ಯವಸ್ಥೆ ಹದಗೆಡಲು ಕಾರಣವಾದ ಕೇಂದ್ರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ಇಂತಹ ದಿವ್ಯ ನಿರ್ಲಕ್ಷ್ಯವನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.Body:ಮಕ್ಕಳ ಸಾವು ಎಂಬುದು ಅತ್ಯಂತ ಹೃದಯ ವಿದ್ರಾವಕ ಸಂಗತಿಯಾಗಿದ್ದು ಯಾವ ಪರಿಹಾರವೂ ಕೂಡ ಪೋಷಕರ ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಕನಿಷ್ಠ ೧೦ ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು. ಬಿಹಾರದಲ್ಲಿ ಈ ಕಾಯಿಲೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಮತ್ತು ಇಂತಹ ವಿಪತ್ತು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.