ಹುಬ್ಬಳ್ಳಿ: ಬೆನ್ನುಹುರಿ ತೊಂದರೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನೊಬ್ಬನಿಗೆ ಸೊಂಟದ ಭಾಗದಲ್ಲಿ ಕೇವಲ 1.5 ಸೆ.ಮೀ ಹೋಲ್ ಮೂಲಕ ಡಾ.ಬಾಲಾಜಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆಯ ಚೇರಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆನ್ನು ಹುರಿ ಕಾಯಿಲೆಗೆ ತುತ್ತಾಗಿದ್ದ ರೋಗಿ, ಸರಿಯಾಗಿ ನಡೆದಾಡಲು ಸಾಧ್ಯವಾಗದೇ ಯಾತನೆ ಅನುಭವಿಸುತ್ತಿದ್ದ. ಆತ ಆಸ್ಪತ್ರೆಗೆ ದಾಖಲಾಗಿದ್ದು, ರೋಗಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದಾಗ ಸೊಂಟದ ಭಾಗದಿಂದ ಕಾಲುಗಳಿಗೆ ಹೋಗುವ ನರಗಳಲ್ಲಿ ಒತ್ತಡ ಬಿದ್ದು ಸೊಂಟ ನೋವು, ಕಾಲುಗಳಲ್ಲಿ ಸೆಳೆತ, ಸ್ಪರ್ಶ ಜ್ಞಾನ ಕಡಿಮೆಯಾಗುವುದು ಕಂಡು ಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವೈದ್ಯಕೀಯ ಕ್ಷೇತ್ರದಲ್ಲಿ ಸತತವಾಗಿ ನಡೆಯುತ್ತಿರುವ ಆವಿಷ್ಕಾರಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ರೋಗಿಗೆ ಮೈಕ್ರೋಸ್ಕೋಪಿ ಯಂತ್ರದ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಲಾಯಿತು. ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ (ಮಿನಿಮಲ್ ಇನ್ ಪೆನ್ ನ್ಯೂ ಮೈಕ್ರೋಸ್ಕೋಪಿಕ್ ಟೂಬಿಲರ್ ಲಂಬಾರ್ ದಿಸ್ ಟೆಕ್ನೋ) ಎಂದು ಕರೆಯುತ್ತಾರೆ ಎಂದು ಡಾ. ಕ್ರಾಂತಿಕಿರಣ ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇಂತಹ ಶಸ್ತ್ರ ಚಿಕಿತ್ಸೆ ನಡೆಸಲು ತಜ್ಞ ವೈದ್ಯರಿಗೆ ಸಾಕಷ್ಟು ಕಲಿಕೆ ಬೇಕಾಗುತ್ತದೆ. ಮೈಕ್ರೋಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ನಡೆಸುವುದು ವೈದ್ಯರಿಗೂ ಸಹ ಸಾಕಷ್ಟು ಸವಾಲಿನ ಕೆಲಸ. ಆದರೆ, ಸೂಕ್ತ ತರಬೇತಿ ಹೊಂದಿದ್ದಲ್ಲಿ ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯ. ಬಾಲಾಜಿ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರ ತಂಡವಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಕ್ರೋಸ್ಕೋಪಿ ಚಿಕಿತ್ಸೆಗೆ ಒಳಗಾಗುವ ರೋಗಿಗೆ ದೇಹದ ಭಾಗದಲ್ಲಿ ಹೆಚ್ಚಿನ ಗಾಯವಾಗುವುದಿಲ್ಲ. ಅಲ್ಲದೇ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತವೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೋಗುವುದನ್ನು ತಪ್ಪಿಸಬಹುದು. ಕಡಿಮೆ ಸಮಯದಲ್ಲಿ ನಿತ್ಯದ ಕಾಯಕಕ್ಕೆ ಮರಳಬಹುದು ಎಂದು ಡಾ. ಕ್ರಾಂತಿಕಿರಣ ತಿಳಿಸಿದರು.
ಇದನ್ನೂ ಓದಿ: ಗೋವಾ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ