ಹುಬ್ಬಳ್ಳಿ: ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಬಾಲಕರ ಮೃತ ದೇಹಗಳು ಇಂದು ಪತ್ತೆಯಾಗಿವೆ.
ಸೋಮವಾರ ಕಲಘಟಗಿ ಪಟ್ಟಣದ ರುಸ್ತುಂ ಕರೆಯಲ್ಲಿ ಈಜಲು ಹೋಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ವಿನಯ್ ಕುಂಬಾರ್ (15) ಅನೂಪ್ ಹುಬ್ಬಳ್ಳಿ (15) ನೀರು ಪಾಲಾಗಿದ್ದರು.
ಕಲಘಟಗಿ ಪಟ್ಟಣದ ಆದರ್ಶ ಶಾಲೆಯಲ್ಲಿ 10ನೇ ತರಗತಿಯಲ್ಲಿ ಇಬ್ಬರು ಓದುತ್ತಿದ್ದರು. ನಿನ್ನೆ ರಾತ್ರಿ ಬಾಲಕರ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಲಘಟಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಇಂದು ಬೆಳಗ್ಗೆ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.