ಹುಬ್ಬಳ್ಳಿ: ಈರುಳ್ಳಿ ತುಂಬಿದ ಲಾರಿ ಹರಿದು ವಿದ್ಯಾರ್ಥಿ ಘಟನಾ ಸ್ಥಳದಲ್ಲಿಯೇ ಸಾವಿಗೀಡಾಗಿರುವ ದುರ್ಘಟನೆ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಸಮೀಪ ನಡೆದಿದೆ.

ಕೇಶ್ವಾಪುರದ ಜುನೈದ ಶೇಕ್ (17) ಮೃತ ವಿದ್ಯಾರ್ಥಿ. ಈತ ಸ್ಕೂಟಿಯಲ್ಲಿ ಪೇಪರ್ ಹಾಗೂ ಉಪಹಾರ ತರಲು ಹೊರಗಡೆ ಹೋಗಿದ್ದ. ಈ ವೇಳೆ ಕಾಡಸಿದ್ದೇಶ್ವರ ಕಾಲೇಜು ಎದುರಿನ ತಿರುವಿನಲ್ಲಿ ಎಪಿಎಂಸಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಹಾಯ್ದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ತಲೆಯ ಮೇಲೆ ಲಾರಿಯ ಚಕ್ರ ಹರಿದು ಹೋಗಿದ್ದರಿಂದ ಮುಖದ ಗುರುತು ಸಿಗದಂತೆ ಛಿದ್ರವಾಗಿದೆ. ಘಟನೆ ನಡೆದ ತಕ್ಷಣವೇ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಉತ್ತರ ವಲಯದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.