ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಚುನಾವಣೆಗಿಂತಲೂ ಶೇ. 5ರಷ್ಟು ಮತದಾನ ಹೆಚ್ಚಳವಾಗಿದೆ.
ರಾತ್ರಿ 8 ಗಂಟೆಯವರೆಗೆ ದೊರೆತ ಅಧಿಕೃತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶೇ. 70.2ರಷ್ಟು ಮತದಾನವಾಗಿದೆ.
ಕ್ಷೇತ್ರವಾರು ಮತದಾನ
69 -ನವಲಗುಂದ -71.48%.
70-ಕುಂದಗೋಳ- 73.08%
71, ಧಾರವಾಡ - 71.16%.
72- ಹುಬ್ಬಳ್ಳಿ-ಧಾರವಾಡ ಪೂರ್ವ-71.62%
, 73- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- 64.62%.
74- ಹುಬ್ಬಳ್ಳಿ ಧಾರವಾಡ ಪಶ್ಚಿಮ- 63.86%
, 75 -ಕಲಘಟಗಿ-75.98%
83 - ಶಿಗ್ಗಾಂವ್- 71.68%.
ಇನ್ನು 2014 ರ ಲೋಕಸಭೆ ಚುನಾವಣೆಯಲ್ಲಿ 65.98% ಮತದಾನ ದಾಖಲಾಗಿತ್ತು.
ಸ್ಟ್ರಾಂಗ್ ರೂಂ ಸೇರಿದ ಅಭ್ಯರ್ಥಿಗಳ ಹಣೆಬರಹ...
ಧಾರವಾಡ ಲೋಕಸಭೆಯಲ್ಲಿ 19 ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಮತದಾನದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆ, ತಾಂತ್ರಿಕ ದೋಷಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ವಿವಿ ಪ್ಯಾಟ್, ಮತಯಂತ್ರ ಪ್ಯಾಕಿಂಗ್ ಕಾರ್ಯದಲ್ಲಿ ಚುನಾವಣಾ ಸಿಬ್ಬಂದಿ ಕಾರ್ಯನಿರತವಾಗಿದ್ದು, ಧಾರವಾಡದ ಕೃಷಿ ವಿವಿಯಲ್ಲಿನ ಸ್ಟ್ರಾಂಗ್ ರೂಂಗೆ ಬಿಗಿ ಭದ್ರತೆಯಲ್ಲಿ ವೋಟಿಂಗ್ ಮಷಿನ್ಗಳನ್ನು ಸಾಗಿಸಲಾಗುತ್ತಿದೆ. ಮೇ. 23 ರಂದು ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.