ETV Bharat / state

ಅಂದು ಗುತ್ತಿಗೆದಾರ,ಇಂದು ಪ್ರಗತಿ ಪರ ರೈತ ; ಸ್ಟ್ರಾಬೆರಿ ಬೆಳೆದು ಮಾದರಿಯಾದ ಶಶಿಧರ್​!! - Strawberry crop yields in Kalaghatagi

ಕೆಜಿ ಹಣ್ಣು 150 ರೂ.ವರೆಗೂ ಮಾರಾಟವಾಗುತ್ತಿದೆ. ಇದರಿಂದಾಗಿ ನಿತ್ಯ ನೂರಾರು ರೈತರು ಶಶಿಧರ್ ಹೊಲಕ್ಕೆ ಬಂದು ಮಾಹಿತಿ ಪಡೆಯುತ್ತಾರೆ. ಇವರ ಹೊಲದಲ್ಲಿ ನಿತ್ಯ 20ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ..

Shashidhar Goraver
ಶಶಿಧರ್
author img

By

Published : Nov 27, 2020, 9:17 PM IST

ಕಲಘಟಗಿ: ಅಂದು ಗುತ್ತಿಗೆದಾರನಾಗಿದ್ದ ಯುವಕ ಇಂದು ಪ್ರಗತಿಪರ ರೈತ. ರಾಜ್ಯದಲ್ಲಿ ಯಾವ ರೈತರೂ ಬೆಳೆಯದ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಗಳಿಸೋ ಮೂಲಕ ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸಿರುವ ಶಶಿಧರ ಇತರರಿಗೆ ಮಾದರಿಯಾಗಿದ್ದಾರೆ.

ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಾತ್ರ ಬೆಳೆಯಲಾಗುತ್ತಿದ್ದ ಸ್ಟ್ರಾಬೆರಿ ಇದೀಗ ಧಾರವಾಡ ಜಿಲ್ಲೆಯಲ್ಲಿ ಬೆಳೆಯಲಾಗ್ತಿದೆ. ಮೊದಲು ಗುತ್ತಿಗೆದಾರರಾಗಿದ್ದ ಶಶಿಧರ್ ಗೊರವರ್, ಈಗ ಆ ಕೆಲಸಕ್ಕೆ ಗುಡ್‍ಬೈ ಹೇಳಿ, ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ ಸ್ಟ್ರಾಬೆರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.

ಶಶಿಧರ್ ಗೊರವರ್ ಮಾತನಾಡಿದರು

ಹಿಂದೆ ಉದ್ಯೋಗ ಅರಸಿ ಮಹಾರಾಷ್ಟ್ರದ ಮಹಾಬಳೇಶ್ವರಕ್ಕೆ ಹೋಗಿದ್ದ ಶಶಿಧರ್, ಇಂದು ಗುತ್ತಿಗೆದಾರಿಕೆ ಮಾಡುತ್ತ ಅಲ್ಲೇ ಒಂದು ಎಕರೆ ಜಮೀನು ಗುತ್ತಿಗೆ ಪಡೆದು ಸ್ಟ್ರಾಬೆರಿ ಬೆಳೆದು ಸಕ್ಸಸ್ ಆಗಿದ್ದರು. ಇದೀಗ ಹುಲ್ಲಂಬಿಯಲ್ಲಿ 6 ಎಕರೆ ಜಮೀನು ಖರೀದಿಸಿ 1 ಎಕರೆಯಲ್ಲಿ ಸ್ಟ್ರಾಬೆರಿ ಬೆಳೆದಿದ್ದಾರೆ.

ಕ್ಯಾಲಿಫೋರ್ನಿಯಾದಿಂದ 45 ರೂ.ಗೆ ಒಂದರಂತೆ 700 ಸ್ಟ್ರಾಬೆರಿ ಸಸಿ ತರಿಸಿ ನರ್ಸರಿ ಮೂಲಕ 35 ಸಾವಿರ ಸಸಿ ಮಾಡಿದ್ದರು. ಆದರೆ, ಕಳೆದ ವರ್ಷ ಉಂಟಾದ ಮಹಾ ಪ್ರವಾಹಕ್ಕೆ 10 ಸಾವಿರ ಸಸಿ ಹಾಳಾಗಿದ್ದವು. ಉಳಿದ 25 ಸಾವಿರ ಸಸಿಗಳನ್ನು 1 ಎಕರೆಯಲ್ಲಿ ನಾಟಿ ಮಾಡಿದರು. ಅವು ಈಗ ಫಲ ಕೊಡುತ್ತಿವೆ. ನಿತ್ಯ 150 ರಿಂದ 250 ಕೆಜಿವರೆಗೂ ಹಣ್ಣು ಬೆಳೆಯುತ್ತಿದ್ದಾರೆ.

ಕೆಜಿ ಹಣ್ಣು 150 ರೂ.ವರೆಗೂ ಮಾರಾಟವಾಗುತ್ತಿದೆ. ಇದರಿಂದಾಗಿ ನಿತ್ಯ ನೂರಾರು ರೈತರು ಶಶಿಧರ್ ಹೊಲಕ್ಕೆ ಬಂದು ಮಾಹಿತಿ ಪಡೆಯುತ್ತಾರೆ. ಇವರ ಹೊಲದಲ್ಲಿ ನಿತ್ಯ 20ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. ಮುಂದೆ ಜಾಮ್ ಫ್ಯಾಕ್ಟರಿ ಆರಂಭಿಸಿ ಇನ್ನಷ್ಟು ಮಂದಿಗೆ ಕೆಲಸ ಕಲ್ಪಿಸಲು ಚಿಂತನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.