ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತಿದ್ದು, ಜೂನ್ 14 ರಿಂದ ಹಂತ ಹಂತವಾಗಿ ಅನ್‌ಲಾಕ್ ಮಾಡಲಾಗುವುದು. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಶೇ 7 ರಷ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಲಿದೆ. ಆದರೆ ಕೊರೊನಾ ಸಂಪೂರ್ಣವಾಗಿ ಹೋಗಿದೆ ಅಂತಲ್ಲಾ. ಇದನ್ನು ಜನರು ಅರ್ಥ ಮಾಡಿಕೊಂಡು ತಮ್ಮ ಆರೋಗ್ಯದ ಕಾಳಜಿ ಮಾಡಿಕೊಂಡು ದೇಶದ ರಕ್ಷಣೆ ಮಾಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಅನ್‌ಲಾಕ್ ಮಾಡಿದ ಕೂಡಲೇ ಮತ್ತೆ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಆಯಾ ಜಿಲ್ಲೆಯ ಸ್ಥಳೀಯ ಆಡಳಿತದವರು ಕಟ್ಟುನಿಟ್ಟಿನ ನಿಯಮಗಳ ಮೂಲಕ ಜನರನ್ನು ನಿಯಂತ್ರಣ ಮಾಡಬೇಕು. ಇದರ ಜೊತೆಗೆ ಜನರ ಸಹಕಾರವೂ ತುಂಬಾ ಮುಖ್ಯ. ಇಂತಹ ಸಂದಿಗ್ಧ ವೇಳೆಯಲ್ಲಿ ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದುಕೊಳ್ಳಬೇಕು ಎಂದರು.
ಓದಿ: ಕರುನಾಡ ಅನ್ಲಾಕ್ಗೆ ಸಿದ್ಧತೆ : ಯಾವೆಲ್ಲ ವಲಯಗಳಿಗೆ ಸಿಗಲಿದೆ ವಿನಾಯಿತಿ?