ETV Bharat / state

ರಾಜ್ಯಾದ್ಯಂತ ಈದ್​ ಉಲ್​ ಫಿತರ್ ಸಂಭ್ರಮ, ಮುಸ್ಲೀಂ ಬಾಂಧವರಿಂದ ಪ್ರಾರ್ಥನೆ, ಶುಭಾಶಯ ವಿನಿಮಯ - kalburgi

ರಾಜ್ಯಾದ್ಯಂತ ಈದ್​ ಉಲ್​ ಫಿತರ್​ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಆಯಾ ಜಿಲ್ಲಾ ಕೇಂದ್ರಗಳ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.

ರಾಜ್ಯಾದ್ಯಂತ ಈದ್​ ಉಲ್​ ಫಿತರ್​ ಸಂಭ್ರಮ
author img

By

Published : Jun 5, 2019, 12:59 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬದ ಆಚರಣೆ ಮಾಡಲಾಯಿತು. ಇಲ್ಲಿನ ಚೆನ್ನಮ್ಮ ವೃತ್ತದಲ್ಲಿರುವ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮೌಲಾನಾ ಜಹೀರುದ್ದೀನ್​ ಸಾಬ್ ಪ್ರಾರ್ಥನಾ ವಿಧಿ ಬೋಧನೆ‌ ಮಾಡಿ, ಕುರಾನ್ ಪಠಣ ಮಾಡಿದರು. ಶಾಸಕ ಪ್ರಸಾದ ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಯಚೂರು: ಜಿಲ್ಲೆಯಲ್ಲಿ ಮುಸ್ಲಿಂ ಭಾಂಧವರು ಸಂಭ್ರಮ-ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ. ನಗರದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಮರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆಗೆ ಆಗಮಿಸಿದ ಚಿಣ್ಣರ ಉಡುಪುಗಳು ವಿಶೇಷ ಗಮನ ಸೆಳೆದವು. ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕಿಶೋರ್ ಬಾಬು ಸೇರಿದಂತೆ ರಾಜಕೀಯ ಗಣ್ಯರು ಈದ್ಗಾ ಮೈದಾನದ ಬಳಿ ಮುಸ್ಲಿಮರಿಗೆ ಶುಭಾಶಯ ಕೋರಿದರು. ಬಿರು ಬೇಸಿಗೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲೂ ಕೂಡ ಈದ್​ ಉಲ್​ ಫಿತರ್ ಹಬ್ಬದ ಸಂಭ್ರಮ ಜೋರಾಗಿತ್ತು. ನಗರದ ಹಳೇ ಮತ್ತು ಹೊಸ ಈದ್ಗಾ ಮೈದಾನಗಳಲ್ಲಿ ಸೇರಿದ ಸಾವಿರಾರು ಮಂದಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿಕೊಂಡರು. ಕೆಲವರು ಅಲ್ಲಲ್ಲಿ ಶಕ್ತಾ ನುಸಾರ ದಾನ ಧರ್ಮಗಳನ್ನು ಮಾಡುತ್ತಾ, ಸಿಹಿ ವಿತರಿಸಿದ್ದು ಕಂಡು ಬಂತು.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲೂ ಕೂಡ ರಂಜಾನ್ ಸಂಭ್ರಮ ಮನೆ ಮಾಡಿದೆ. ನಗರದ ಕೆಂಪನಹಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಭಾಂಧವರು ನಮಾಜ್ ಮಾಡಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಬಳಿಕ ಒಬ್ಬರಿಗೊಬ್ಬರೂ ಶುಭಾಶಯ ತಿಳಿಸಿ ಪರಸ್ಪರ ಆಲಿಂಗಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ನಗರದಲ್ಲಿ ಎಲ್ಲಿಯೂ ಕೂಡ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಕಲಬುರಗಿ: ಕಲಬುರಗಿಯಲ್ಲೂ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆ ಈದ್ಗಾ ಮೈದಾನಗಳಿಗೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ತರಹೇವಾರಿ ಅಡುಗೆಗಳನ್ನು ಮಾಡಿದ ಮುಸ್ಲಿಂ ಬಾಂಧವರು, ಸಾಮೂಹಿಕ ಪ್ರಾರ್ಥನೆಯ ನಂತರ ಸಹ ಪಂಕ್ತಿಯಲ್ಲಿ ಆಹಾರ ಸವಿದರು.

ರಾಜ್ಯಾದ್ಯಂತ ಈದ್​ ಉಲ್​ ಫಿತರ್​ ಸಂಭ್ರಮ

ಕಲಬುರಗಿ ನಗರ ಸೇರಿದಂತೆ ಚಿಂಚೋಳಿ, ಚಿತ್ತಾಪುರ, ಸೇಡಂ ಹೀಗೆ ಎಲ್ಲಾ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಗಳ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

Intro:ಕಲಬುರಗಿ:ಜಿಲ್ಲೆಯಾದ್ಯಂತ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.ಜಿಲ್ಲೆಯ ವಿವಿಧೆಡೆ ಈದ್ಗಾ ಮೈದಾನಗಳಿಗೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈದ್ಗಾ ಮೈದಾನದಲ್ಲಿ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು. ಮಹಿಳೆಯರು ಮನೆಗಳಲ್ಲಿಯೇ ದೆಡವರಿಗೆ ಪ್ರಾರ್ಥನೆ ಸಲ್ಲಿಸಿದರು.ಎಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ.ಮನೆಗಳಲ್ಲಿ ತರಹೇವಾರಿ ಅಡುಗೆಗಳನ್ನು ಮಾಡಿದ ಮುಸ್ಲಿಂ ಬಾಂಧವರು, ಸಾಮೂಹಿಕ ಪ್ರಾರ್ಥನೆಯ ನಂತರ ಸಹ ಪಂಕ್ತಿಯಲ್ಲಿ ಆಹಾರ ಸವಿದರು.

ಜಿಲ್ಲಾದ್ಯಾಂತ ಸಂಭ್ರಮದ ರಂಜಾನ್ ಆಚರಣೆ.

ಕಲಬುರಗಿ ನಗರ ಸೇರಿದಂರೆ ಚಿಂಚೋಳಿ,ಚಿತ್ತಾಪುರ,ಸೇಡಂ ಈಗೆ ಎಲ್ಲಾ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮದಲ್ಲಿ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವರ ಮೋರೆ ಹೋದರು.

ರಂಜಾನ್ ಹಬ್ಬವು ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರ ಹಬ್ಬವಾಗಿದ್ದು.ವರ್ಷದಲ್ಲಿ ಒಂದು ಬಾರಿ ಬರುವ ರಂಜಾನ್ ಹಬ್ಬದಲ್ಲಿ ಎಲ್ಲರೂ ಭಾಗಿಯಾಗುವುದು ಹಬ್ಬದ ಇನ್ನೊಂದು ವಿಶೇಷವಾಗಿದೆ.ಈ ತಿಂಗಳಲ್ಲಿ ಎಲ್ಲಾ ಮುಸ್ಲಿಂ ಬಂಧವರು ಉಪವಾಸ ಮಾಡುವುದರ ಜೊತೆಗೆ ದಾನ ಧರ್ಮ ಮಾಡುವುದು ವಾಡಿಕೆಯಾಗಿದೆ.ರಂಜಾನ್ ತಿಂಗಳು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಉಪವಾಸ ಮಾಡೋತ್ತಾರೆ.ರಂಜಾನದ ಕೂನೆಯದಿನವಾದ ಇಂದು ಅಲ್ಲಾನ ಮುಂದೆ ಕೂತು ಕೈಬಾಚಿ ಬೇಡಿಕೊಳ್ಳುತ್ತಾರೆ.ರಂಜಾನ್ ಹಬ್ಬ ಬಂದರೆ ಮುಸ್ಲಿಂ ಬಾಂಧವರ ಮನೆಯಲ್ಲಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿರುತ್ತದೆ.Body:ಕಲಬುರಗಿ:ಜಿಲ್ಲೆಯಾದ್ಯಂತ ರಂಜಾನ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.ಜಿಲ್ಲೆಯ ವಿವಿಧೆಡೆ ಈದ್ಗಾ ಮೈದಾನಗಳಿಗೆ ತೆರಳಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈದ್ಗಾ ಮೈದಾನದಲ್ಲಿ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು. ಮಹಿಳೆಯರು ಮನೆಗಳಲ್ಲಿಯೇ ದೆಡವರಿಗೆ ಪ್ರಾರ್ಥನೆ ಸಲ್ಲಿಸಿದರು.ಎಲ್ಲೆಡೆ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ.ಮನೆಗಳಲ್ಲಿ ತರಹೇವಾರಿ ಅಡುಗೆಗಳನ್ನು ಮಾಡಿದ ಮುಸ್ಲಿಂ ಬಾಂಧವರು, ಸಾಮೂಹಿಕ ಪ್ರಾರ್ಥನೆಯ ನಂತರ ಸಹ ಪಂಕ್ತಿಯಲ್ಲಿ ಆಹಾರ ಸವಿದರು.

ಜಿಲ್ಲಾದ್ಯಾಂತ ಸಂಭ್ರಮದ ರಂಜಾನ್ ಆಚರಣೆ.

ಕಲಬುರಗಿ ನಗರ ಸೇರಿದಂರೆ ಚಿಂಚೋಳಿ,ಚಿತ್ತಾಪುರ,ಸೇಡಂ ಈಗೆ ಎಲ್ಲಾ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮದಲ್ಲಿ ಈದ್ಗಾ ಮೈದಾನದಲ್ಲಿ ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವರ ಮೋರೆ ಹೋದರು.

ರಂಜಾನ್ ಹಬ್ಬವು ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರ ಹಬ್ಬವಾಗಿದ್ದು.ವರ್ಷದಲ್ಲಿ ಒಂದು ಬಾರಿ ಬರುವ ರಂಜಾನ್ ಹಬ್ಬದಲ್ಲಿ ಎಲ್ಲರೂ ಭಾಗಿಯಾಗುವುದು ಹಬ್ಬದ ಇನ್ನೊಂದು ವಿಶೇಷವಾಗಿದೆ.ಈ ತಿಂಗಳಲ್ಲಿ ಎಲ್ಲಾ ಮುಸ್ಲಿಂ ಬಂಧವರು ಉಪವಾಸ ಮಾಡುವುದರ ಜೊತೆಗೆ ದಾನ ಧರ್ಮ ಮಾಡುವುದು ವಾಡಿಕೆಯಾಗಿದೆ.ರಂಜಾನ್ ತಿಂಗಳು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಉಪವಾಸ ಮಾಡೋತ್ತಾರೆ.ರಂಜಾನದ ಕೂನೆಯದಿನವಾದ ಇಂದು ಅಲ್ಲಾನ ಮುಂದೆ ಕೂತು ಕೈಬಾಚಿ ಬೇಡಿಕೊಳ್ಳುತ್ತಾರೆ.ರಂಜಾನ್ ಹಬ್ಬ ಬಂದರೆ ಮುಸ್ಲಿಂ ಬಾಂಧವರ ಮನೆಯಲ್ಲಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿರುತ್ತದೆ.Conclusion:

For All Latest Updates

TAGGED:

kalburgi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.