ಹುಬ್ಬಳ್ಳಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಬಿಕ್ಕಟ್ಟು ಕುರಿತಂತೆ ನ.23ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ಬಿಕ್ಕಟ್ಟು ವಿಚಾರಣೆಗಾಗಿ ಪ್ರಭಾವಿ ಹಾಗೂ ನುರಿತ ಕಾನೂನು ತಜ್ಞರನ್ನು ನೇಮಕ ಮಾಡುವಂತೆ ಅಡ್ವೋಕೆಟ್ ಜನರಲ್ ಅವರಿಗೆ ಸೂಚಿಸಿದ್ದೇನೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಸಿದ್ಧವಾಗಿದೆ ಎಂದು ಹೇಳಿದರು.
ಇನ್ನು, ಸಿಇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಸಿಇಟಿ ಜಾರಿಗೆ ತರುವ ಮುನ್ನ ಸರಿಯಾಗಿ ಅಧ್ಯಯನ ಮಾಡುತ್ತೇವೆ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಅರವಿಂದ ಲಿಂಬಾವಳಿ ಪ್ರಕರಣ ಕುರಿತಂತೆ ಮಾತನಾಡಿದ ಅವರು, ನಾನೂ ಊರಲ್ಲಿ ಇರಲಿಲ್ಲ. ಈ ಬಗ್ಗೆ ಅರವಿಂದ ಲಿಂಬಾವಳಿ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರು ತೊರೆಯುವ ಹೇಳಿಕೆ: ಐಟಿಬಿಟಿ ಕಂಪನಿಗಳ ಜೊತೆ ಸಭೆಗೆ ಮುಂದಾದ ಸಿಎಂ