ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ವಿಶಾಖಪಟ್ಟಣಂ ನಿಲ್ದಾಣಗಳ ನಡುವೆ ವಿಶೇಷ ಏಕಮುಖ ಎಕ್ಸ್‌ಪ್ರೆಸ್ (07305) ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ರೈಲುಗಳ ಮಾಹಿತಿ: ಈ ವಿಶೇಷ ರೈಲು ಜೂನ್ 17 ರಂದು ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಗದಗ (03:03/03:05pm), ಕೊಪ್ಪಳ (03:48/03:50pm), ಹೊಸಪೇಟೆ (04:20/04:25pm), ತೋರಣಗಲ್ಲು (04:53/04:55pm), ಬಳ್ಳಾರಿ (06:25/06:30pm), ಆದೋನಿ (08:43/08:45pm), ರಾಯಚೂರು (09:43/09:45pm), ಕೃಷ್ಣಾ (10:05/10:10pm), ಚಿತ್ತಾಪುರ (12:15/12:17am), ವಿಕಾರಾಬಾದ್ (02:15/02:17am), ಲಿಂಗಂಪಲ್ಲಿ (03:00/03:02am), ಸಿಕಂದರಾಬಾದ್ (03:45/04:00am), ನಲಗೊಂಡ (05:30/05:32am), ಗುಂಟೂರು (08:00/08:10am), ವಿಜಯವಾಡ (09:35/09:45am), ಏಲೂರು (10:39/10:40am), ತಾಡೆಪಲ್ಲಿಗುಡಂ (11:13/11:15am), ರಾಜಮಂಡ್ರಿ (11:59am/12:00pm), ಸಾಮಲಕೋಟ್ (12:49/12:50pm), ತುನಿ (01:50/01:51pm) ಈ ನಿಲ್ದಾಣಗಳ ಮೂಲಕ ಮರುದಿನ ಸಂಜೆ 4:30 ಗಂಟೆಗೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ.
ಎಸಿ ಟು ಟೈಯರ್ ಬೋಗಿ (1), ಎಸಿ ತ್ರಿ ಟೈಯರ್ ಬೋಗಿಗಳು (4), ಸ್ಲೀಪರ್ ಕ್ಲಾಸ್ ಬೋಗಿಗಳು (9), ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು (3) ಮತ್ತು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು (2) ಸೇರಿದಂತೆ ಒಟ್ಟು 19 ಬೋಗಿಗಳ ಸಂಯೋಜನೆಯನ್ನು ರೈಲು ಹೊಂದಿದೆ.
8,071 ಕೋಟಿ ರೂ. ಆದಾಯ ಸಂಗ್ರಹಿಸಿದ ನೈರುತ್ಯ ರೈಲ್ವೆ: ಹುಬ್ಬಳ್ಳಿಯ ನೈರುತ್ಯ ರೈಲ್ವೆಯು 2022-23ರಲ್ಲಿ ಉತ್ತಮ ಗಳಿಕೆ ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿದೆ. ರೈಲು ಪ್ರಯಾಣ ದರ, ಸರಕು ಸಾಗಣೆ ಸೇರಿ ವಿವಿಧ ಸೇವೆಗಳ ಮೂಲಕ ಒಟ್ಟಾರೆ 8,071 ಕೋಟಿ ರೂ. ಆದಾಯವನ್ನು ಸಂಗ್ರಹಿಸಿದೆ. 2003ರಲ್ಲಿ ನೈರುತ್ಯ ರೈಲ್ವೆ ವಲಯ ಸ್ಥಾಪನೆಯಾದಾಗಿನಿಂದಲೂ ಇಷ್ಟೊಂದು ಗಳಿಕೆಯಾಗಿರಲಿಲ್ಲ. ಆದರೆ, ಈ ಬಾರಿ ಅಧಿಕ ಒಟ್ಟು ಆದಾಯ 8,071 ಕೋಟಿ ರೂ. ಗಳಿಸಿದೆ. (ಪ್ರಯಾಣಿಕರಿಂದ- 2,756 ಕೋಟಿ ರೂಪಾಯಿ, ಸರಕು ಸಾಗಣೆಯಿಂದ - 4,696 ಕೋಟಿ ರೂಪಾಯಿ, ವಿವಿಧ ಮೂಲಗಳಿಂದ - 348 ಕೋಟಿ ರೂಪಾಯಿ ಹಾಗೂ ಇತರೆ ಮೂಲಗಳಿಂದ (ಕೋಚಿಂಗ್) 271 ಕೋಟಿ ರೂಪಾಯಿ) ಇದೇ ಪ್ರಪ್ರಥಮ ಬಾರಿಗೆ ಒಟ್ಟು ಆದಾಯ 8,000 ಕೋಟಿ ರೂಪಾಯಿ ದಾಟಿದೆ.
2022-23ರಲ್ಲಿನ ಒಟ್ಟು ಆದಾಯ 2021-22ರಲ್ಲಿ ದಾಖಲಾದ ಶೇ.30ಕ್ಕಿಂತ ಹೆಚ್ಚಾಗಿರುವುದು ವಿಶೇಷವಾಗಿದೆ. ನೈರುತ್ಯ ರೈಲ್ವೆ ವಲಯ 2007-08ರಲ್ಲಿ ದಾಖಲಿಸಿದ್ದ 46.24 ಮಿಲಿಯನ್ ಟನ್‌ಗಳ ಹಿಂದಿನ ದಾಖಲೆ ಮೀರಿ, 2022-23ರಲ್ಲಿ 47.7 ಮಿಲಿಯನ್ ಟನ್‌ಗಳ ಸರಕುಗಳನ್ನು ಸಾಗಾಟ ಮಾಡಿದೆ. ವಲಯದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಗ್ರಾಹಕರ ಕೇಂದ್ರಿತ ವ್ಯಾಪಾರ ಅಭಿವೃದ್ಧಿ ಘಟಕಗಳ (Business Development Units) ಸ್ಥಾಪನೆ ಮತ್ತು ರೈಲ್ವೆ ಯೋಜನೆ ಹಾಗೂ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ ಸಂಘಟಿತ ಪ್ರಯತ್ನದ ಫಲಗಳಿಂದ ಈ ಸಾಧನೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನ ಮಾಲಿನ್ಯವು ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು: ಗ್ರೀನ್ಪೀಸ್ ಇಂಡಿಯಾ