ಹುಬ್ಬಳ್ಳಿ: ಪ್ರಪಂಚದಾದ್ಯಂತ ಭೀತಿಯುಂಟು ಮಾಡಿರುವ ಕೊರೊನಾ ವೈರಸ್ ಹರಡದಿರಲಿ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.
ಗುರುಸಿದ್ದೇಶ್ವರ ಮಹಾಶಿವಯೋಗಿಗಳ ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಶ್ರೀಗಳು, ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್‌ನಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಕಷ್ಡು ಸಾವು ನೋವುಗಳಿಂದಾಗಿ ಜನ ಆತಂಕ್ಕಿತರಾಗಿದ್ದಾರೆ. ಕೂಡಲೇ ರಾಷ್ಟ್ರವ್ಯಾಪ್ತಿ ಆವರಸಿರುವ ಕೊರೊನಾ ರೋಗ ನಮ್ಮ ನೆಲದಿಂದ ಬಹುದೂರ ಹೋಗಲಿ ಎಂದರು.
ದೇಶಾದ್ಯಂತ ಸಾವು ನೋವು ಸಂಭವಿಸುತ್ತಿವೆ. ನಮ್ಮ ಜನಕ್ಕೆ ಯಾವುದೇ ರೋಗಭಾದೆಗಳು ಆವರಿಸದಂತೆ ಗುರುಸಿದ್ದೇಶ್ವರನಿಗೆ ವಿಶೇಷ ಪೂಜೆ ಮಾಡಲಾಗಿದೆ. ಜನರು ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಲ್ಲದೇ ಆರೋಗ್ಯಯುತ ಜೀವನದ ಬಗ್ಗೆ ಗಮನಹರಿಸುವುದು ಅವಶ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.