ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಾತೆ ಮಹಾದೇವಿಯವರು ಲಿಂಗೈಕ್ಯರಾಗಿದ್ದಾರೆ. ಆದರೆ ಅವರ ಸಾವನ್ನು ಕೆಲ ವಿಕೃತ ಮನಸ್ಸಿನ ವ್ಯಕ್ತಿಗಳು ಸಂಭ್ರಮಿಸುತ್ತಿದ್ದಾರೆ. ಮಾತೆ ಮಹಾದೇವಿ ಅವರ ಸಾವಿನ ಬಗ್ಗ ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ವಿಕೃತ ಆನಂದ ಅನುಭವಿಸಿದ್ದಾರೆ.
'ಲಿಂಗಾಯತ ವೀರಶೈವ ಸಮಾಜ ವಿಭಜನೆ ಮಾಡಲು ಹೊರಟವರು ತಾವೇ ಲೋಕ ಬಿಟ್ಟು ಹೋದರು. ಮತ್ತೆ ಭೂಮಿ ಮೇಲೆ ಹುಟ್ಟುವಾಗ ಧರ್ಮ ಕಾಯುವ ಮಾತೆಯಾಗಿ ಹುಟ್ಟು, ಇಲ್ಲವಾದ್ರೆ ಹುಟ್ಟಬೇಡ' ಎಂದು ವ್ಯಂಗ್ಯವಾಡಿದ್ದಾರೆ.
'ಧರ್ಮ ಕಾಪಾಡು ಅಂತ ದೀಕ್ಷೆ ಕೊಟ್ರೆ, ಧರ್ಮ ಒಡೆದ ಪಾಪ ಸುಮ್ನೆ ಬಿಡುತ್ತಾ ಕಾವಿ ಮಹಿಮೆ' 'ಅಯ್ಯೋ ವಿಧಿ ನೀನೆಷ್ಟು ಒಳ್ಳೆಯವನು' ಎಂದು ಫೇಸ್ಬುಕ್ ಹಾಗೂ ವಾಟ್ಸ್ಆಪ್ ಗ್ರೂಪ್ಗೆ ಹಾಕಿ ವಿಕೃತಿ ಮೆರೆಯುತ್ತಿದ್ದಾರೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಸಾವಿನಲ್ಲೂ ವಿಕೃತಿ ಮೆರೆಯದಂತೆ ಮನವಿ ಮಾಡಿದ್ದಾರೆ.