ಧಾರವಾಡ: ಜನಸಾಮಾನ್ಯರಿಗೆ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಸಚಿವರಿಂದಲೇ ಬೇಜವಾಬ್ದಾರಿ ಪ್ರದರ್ಶನವಾಗ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವ ಘಟನೆ ಇವತ್ತು ಧಾರವಾಡದಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಮುಗಿಸಿ ಊಟಕ್ಕೆ ಹೋಗುವಾಗ, ಸಚಿವ ಎಸ್ ಸುರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲು ಹೊರಗಡೆ ಬಹಳಷ್ಟು ಜನ ನಿಂತಿದ್ದರು. ಸಚಿವರು ಬರುತ್ತಿದ್ದಂತೆ ಸಾಮಾಜಿಕ ಅಂತರ ಮರೆತು, ಮನವಿ ಸಲ್ಲಿಸಲು ಜನ ಮುಗಿಬಿದ್ದಿದ್ದಾರೆ.
ಇದನ್ನು ಕಂಡರೂ ಕೂಡ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಜಾಣ ಮೌನ ನಡೆ ಅನುಸರಿಸಿದ್ದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಮುಗಿ ಬಿದ್ದರೂ ಸಚಿವರು ಹೇಳಲಿಲ್ಲ. ಮುಗಿ ಬಿದ್ದ ಜನರ ಮಧ್ಯದಲ್ಲೇ ನಿಂತು ಸಚಿವರು ಮನವಿ ಸ್ವೀಕರಿಸಿದ್ದಾರೆ. ಸಭೆಯ ಬಳಿಕ ಜನ ಸಂದಣಿಯ ನಡುವೆಯೇ ಸಚಿವರು ಊಟಕ್ಕೆ ತೆರಳಿದ್ದಾರೆ.