ETV Bharat / state

ಸ್ಮಾರ್ಟ್ ಮಾಸ್ಕ್... ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿಯ ವಿನೂತನ ಪ್ರಯತ್ನ - ಇಂಜಿನಿಯರ್ ಸ್ಟೂಡೆಂಟ್ ಶ್ರೀನಿವಾಸ ಪರಡ್ಡಿ

ಮನೆಯಲ್ಲೇ ನಿರುಪಯುಕ್ತ ವಸ್ತುಗಳನ್ನು ಬಳಸಿ ಸ್ಮಾರ್ಟ್ ಮಾಸ್ಕ್ ತಯಾರಿಸಬಹುದು ಎಂದು ನವನಗರದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀನಿವಾಸ ಪರಡ್ಡಿ ತೋರಿಸಿಕೊಟ್ಟಿದ್ದಾರೆ.‌

Smart Mask
ಸ್ಮಾರ್ಟ್ ಮಾಸ್ಕ್
author img

By

Published : May 30, 2020, 11:21 AM IST

ಹುಬ್ಬಳ್ಳಿ: ಕೊರೊನಾ ಬಂದ‌ ಮೇಲೆ ಮಾಸ್ಕ್​​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಈ ನಡುವೆ ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ಮಾಸ್ಕ್ ತಯಾರಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.

ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ಆದೇಶ ಹೊರಡಿಸಿದೆ. ಅದರಂತೆ ಸಾರ್ವಜನಿಕರು ಸಹ ತಮಗೆ ಅನುಕೂಲ ಹಾಗೂ ತಮ್ಮ ಆರ್ಥಿಕತೆ ನೋಡಿಕೊಂಡು ಮಾಸ್ಕ್ ಖರೀದಿಸುತ್ತಿದ್ದಾರೆ. ಈ ಮಧ್ಯೆ ಮನೆಯಲ್ಲೇ ನಿರುಪಯುಕ್ತ ವಸ್ತುಗಳನ್ನು ಬಳಸಿ ಸ್ಮಾರ್ಟ್ ಮಾಸ್ಕ್ ತಯಾರು ಮಾಡಬಹುದು ಎಂದು ನವನಗರದ ​ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀನಿವಾಸ ಪರಡ್ಡಿ ತೋರಿಸಿಕೊಟ್ಟಿದ್ದಾರೆ.‌

ಇಂಜಿನಿಯರ್ ಸ್ಟೂಡೆಂಟ್ ಶ್ರೀನಿವಾಸ ಪರಡ್ಡಿ

ಸಂವಹನ ಕೊರತೆ ನೀಗಿಸುವ ಕಾರಣಕ್ಕೆ ಈ ಮಾಸ್ಕ್​ಗೆ ಸ್ಪೀಕರ್ ಹಾಗೂ ಮೈಕ್ ವ್ಯವಸ್ಥೆ ಮಾಡಿದ್ದಾರೆ. ಕೊರೊನಾ ಸೋಂಕು ತಗುಲದಂತೆ ಸುರಕ್ಷತಾ ಕ್ರಮಗಳ ಜೊತೆಗೆ ಅಗತ್ಯ ಪರಿಕರಗಳ ಜೋಡಣೆ ಮಾಡಲಾಗಿದೆ. ಪ್ರಮುಖವಾಗಿ ಸೋಂಕಿನಿಂದ ದೂರವಿರಲು ಮುಖವನ್ನು ಸುರಕ್ಷಿತವಾಗಿಡಲು ಹಲವು ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಎನ್ 95 ನಂತಹ ಕೆಲ ಮಾಸ್ಕ್​​​ಗಳು ಬಲು ದುಬಾರಿಯಾಗಿದ್ದು, ಕೆಳ ಬಡವರು ಹಾಗೂ ಮಧ್ಯಮ ವರ್ಗದ ಜನರು ಅದನ್ನು ಬಳಸುವುದು ಅಷ್ಟೊಂದು ಸುಲಭವಲ್ಲ.

ಹೀಗಾಗಿ ಜನಸಾಮಾನ್ಯರು ನಿರುಪಯುಕ್ತ ವಸ್ತುಗಳನ್ನು ಬಳಸಿ ವಿನೂತನವಾಗಿ ಪ್ಲಾಸ್ಟಿಕ್ ಬಳಸಿ ಮಾಸ್ಕ್ ತಯಾರಿಸಬಹುದು ಎಂದು ಈ ವಿದ್ಯಾರ್ಥಿ ತೋರಿಸಿಕೊಟ್ಟಿದ್ದಾರೆ. ಶ್ರೀನಿವಾಸ ತಾವೇ ಮನೆಯಲ್ಲಿ ತಯಾರಿಸಿಕೊಂಡು ಧರಿಸಬೇಕೆನ್ನುವ ಕಾರಣಕ್ಕೆ ಮನೆಯಲ್ಲೇ ಚಿಕ್ಕ ಗಾತ್ರದ ಎರಡು ಸ್ಪೀಕರ್ ಹಾಗೂ ಒಂದು ಮೈಕ್ ಹಾಗೂ 800 MH ಬ್ಯಾಟರಿ ಅಳವಡಿಸಿ ಮಾಸ್ಕ್ ತಯಾರಿಸಿದ್ದಾರೆ.

ಮಾಸ್ಕ್ ಹಾಕಿಕೊಂಡು ಇನ್ನೊಬ್ಬರ ಜೊತೆ ಮಾತನಾಡಲು ಈ ಪ್ರಕ್ರಿಯೆ ಸರಳವಾಗಿದ್ದು, ಇದಕ್ಕಾಗಿ 400 ರೂ.ವೆಚ್ಚವಾಗಿದೆಯಂತೆ. ಶ್ರೀನಿವಾಸ ಸ್ಮಾರ್ಟ್ ಮಾಸ್ಕ್ ತಯಾರಿಸಿ ದಿನವಿಡೀ ಬಳಕೆ ಮಾಡುತ್ತಿದ್ದಾರೆ.

‌ಇನ್ನು ಇದರ ವಿಶೇಷತೆ ಏನೆಂದರೆ ಸ್ಮಾರ್ಟ್ ಮಾಸ್ಕ್ ಉಸಿರಾಟ, ಸಂವಹನ, ಫಿಲ್ಟರ್ ಕಾರ್ಯಗಳನ್ನು ಮಾಡುವುದರ ‌ಜೊತೆಗೆ ಎಲ್ಲಾ ರೀತಿಯಿಂದಲೂ ಸುರಕ್ಷಿತವಾಗಿ ಕಾಪಾಡುವುದು ಮತ್ತು ಕಡಿಮೆ ವೆಚ್ಚದ ಶಾಶ್ವತ ಮಾಸ್ಕ್ ಇದಾಗಿದೆ ಎಂದು ವಿದ್ಯಾರ್ಥಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.