ಧಾರವಾಡ: ವೈದ್ಯರು ದಿನನಿತ್ಯ ರೋಗಿಗಳ ಜೊತೆ ಕಾಲ ಕಳೆಯುವಂತವವರು. ಅವರಿಗೂ ಆರೋಗ್ಯದ ಕಡೆ ಗಮನ ವಹಿಸಬೇಕು ಎಂಬ ಉದ್ದೇಶದಿಂದ ಷಟಲ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಧಾರವಾಡ ಆರ್.ಎನ್. ಶೆಟ್ಟಿ ಮೈದಾನದ ಪಕ್ಕದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವೈದ್ಯರು ಹಾಗೂ ಅವರ ಕುಟುಂಬಸ್ಥರು ಷಟಲ್ ಬ್ಯಾಡ್ಮಿಂಟನ್ ಆಡಿ ಖುಷಿಪಟ್ಟರು.
ಹೌದು, ಐಎಂಎ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಆಯೋಜಿಸುವ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯನ್ನು ಈ ಬಾರಿ ಧಾರವಾಡದಲ್ಲಿ ಆಯೋಜಲಾಗಿತ್ತು. ಪ್ರತಿವರ್ಷ ನಡೆಯುವ ಈ ಟೂರ್ನಿಯಲ್ಲಿ ವೈದ್ಯರು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿ ಪ್ರಶಸ್ತಿ ಗೆಲ್ಲಲು ಸೆಣಸಾಡುತ್ತಾರೆ.
ಈ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 140ಕ್ಕೂ ಹೆಚ್ಚು ವೈದ್ಯರು ಮತ್ತು ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರತಿನಿತ್ಯ ರೋಗಿಗಳಿಗೆ ವ್ಯಾಯಾಮದ ಬಗ್ಗೆ ಹೇಳಿಕೊಡುವ ವೈದ್ಯರು ಇಂದು ಧಾರವಾಡದಲ್ಲಿ ಬ್ಯಾಡ್ಮಿಂಟನ್ ಆಡಿ, ರೋಗಳಗನ್ನು ತಡೆಯುವ ಮಾರ್ಗಗಳನ್ನು ಸೂಚಿಸುವ ತಾವೂ ಸಹ ಆರೋಗ್ಯವಾಗಿರಬೇಕು ಎಂಬ ಸಂದೇಶ ಸಾರಿದರು.