ಹುಬ್ಬಳ್ಳಿ: ನೈಋತ್ಯ ರೈಲ್ವೇ ವಲಯದ ವತಿಯಿಂದ ಹಿರಿಯ ಸಾಹಿತಿ ದಿವಂಗತ ನಾಡೋಜ ಪಾಟೀಲ ಪುಟ್ಟಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನೈಋತ್ಯ ರೈಲ್ವೇ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್ ಹಾಗೂ ಎನ್.ಆರ್.ಎಂ.ಎಸ್ ಮುಖಂಡರಾದ ಎ.ಎಂ.ಡಿಕ್ರೂಜ್, ಕನ್ನಡ ನಾಡು ನುಡಿಗೆ ಹಿರಿಯ ಪತ್ರಕರ್ತರಾದ ಪಾಟೀಲ ಪುಟ್ಟಪ್ಪನವರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಭಾಷೆ ಹಾಗೂ ಕನ್ನಡ ಸಂಸ್ಕೃತಿಯನ್ನು ದೇಶಾದ್ಯಂತ ಪರಿಚಯಿಸುವ ಕಾರ್ಯವನ್ನು ಮಾಡುವ ಮೂಲಕ ನಾಡು ಕಂಡ ಅಪ್ರತಿಮ ಹೋರಾಟಗಾರ ನಮ್ಮನ್ನು ಅಗಲಿರುವುದು ಅತೀವವಾಗಿ ನೋವನ್ನು ಉಂಟು ಮಾಡಿದೆ ಎಂದು ಅವರು ಹೇಳಿದರು.
ನಾಡೋಜ ಪಾಪು ಕನ್ನಡ ಆಸ್ತಿಯಾಗಿದ್ದವರು.ಇವರ ಅಗಲಿಕೆಗೆ ರಾಜ್ಯಕ್ಕೆ ಅಲ್ಲದೇ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಕಂಬನಿ ಮಿಡಿದರು. ಇದೇ ವೇಳೆ ಮೌನಾಚರಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮಾಂತಪ್ಪ ನಂದೂರ ಸೇರಿದಂತೆ ಎಸ್.ಡಬ್ಲೂ.ಆರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.