ETV Bharat / state

ಕೋವಿಡ್​ ಟೆಸ್ಟ್​​ಗೆ ಹೆದರಿ ಅಂಗಡಿ ಮುಚ್ಚಿ ಪರಾರಿಯಾದ ವ್ಯಾಪಾರಸ್ಥರು!

ಹುಬ್ಬಳ್ಳಿಯ ದುರ್ಗದಬೈಲ್ ಸೇರಿದಂತೆ ಅವಳಿನಗರದ 15 ಕಡೆಗಳಲ್ಲಿ ಇಂದಿನಿಂದ ರ‍್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದೆ‌. ಸದ್ಯ 60ಕ್ಕೂ ಹೆಚ್ಚು ಜನರ ಕೋವಿಡ್​ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 6 ಜನರಿಗೆ ಸೋಂಕು ದೃಢಪಟ್ಟಿದೆ.

Shopkeepers closed shop fearing of Covid test
ಕೋವಿಡ್​ ಟೆಸ್ಟ್​ ಗೆ ಹೆದರಿ ಅಂಗಡಿ ಮುಚ್ಚಿ ಪರಾರಿಯಾದ ವ್ಯಾಪಾರಸ್ಥರು
author img

By

Published : Jul 30, 2020, 9:08 PM IST

ಹುಬ್ಬಳ್ಳಿ: ಕೊರೊನಾ ಹಾವಳಿ ಜೋರಾಗುತ್ತಿದಂತೆ ಜಿಲ್ಲಾಡಳಿತ ನಗರದ ಜನನಿಬಿಡ ಪ್ರದೇಶದಲ್ಲಿ ಆಂಟಿಜನ್ ಟೆಸ್ಟ್ ನಡೆಸುತ್ತಿದೆ.

ಕೋವಿಡ್​ ಟೆಸ್ಟ್​ ಗೆ ಹೆದರಿ ಅಂಗಡಿ ಮುಚ್ಚಿ ಪರಾರಿಯಾದ ವ್ಯಾಪಾರಸ್ಥರು

ಹುಬ್ಬಳ್ಳಿಯ ದುರ್ಗದ ಬೈಲ್ ಸೇರಿದಂತೆ ಅವಳಿನಗರದ 15 ಕಡೆಗಳಲ್ಲಿ ಇಂದಿನಿಂದ ರ‍್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದೆ‌. ಈ ಹಿನ್ನೆಲೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹುಬ್ಬಳ್ಳಿಯ ದುರ್ಗದ ಬೈಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ದುರ್ಗದಬೈಲ್​​ನಲ್ಲಿ 60ಕ್ಕೂ ಹೆಚ್ಚು ಜನರ ಕೋವಿಡ್​ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 6 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಸೋಂಕು ಕಾಣಿಸಿಕೊಂಡವರ ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ರ‍್ಯಾಪಿಡ್ ಟೆಸ್ಟ್​​ಗೆ ಹೆದರಿ ಮಾರುಕಟ್ಟೆ ಬಂದ್ ಮಾಡಿದ ವ್ಯಾಪಾರಸ್ಥರು:

ಪರೀಕ್ಷೆ ವೇಳೆ 8 ಜನರಿಗೆ ಕೊರೊನಾ ಪಾಸಿಟಿವ್​ ಬರುತ್ತಿದ್ದಂತೆ ಇಡೀ ಮಾರುಕಟ್ಟೆ ಸ್ಥಬ್ದವಾಗಿದೆ. ಬೆಳಗ್ಗೆಯಿಂದಲೇ ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆಸಂಜೆಯಾಗುತ್ತಿದ್ದಂತೆ ಬಿಕೋ ಎನ್ನುತ್ತಿದೆ. ಇನ್ನೊಂದೆಡೆ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಮನೆಗೆ ತೆರಳುವ ದೃಶ್ಯ ಕೂಡ ಕಂಡು ಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.