ಧಾರವಾಡ: ಲಾಕ್‌ಡೌನ್ ಮಧ್ಯೆಯೇ ಅತಿಕ್ರಮಣ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಅಂಗಡಿಗಳನ್ನು ಬೆಳ್ಳಂ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ಇನ್ನು ಸಿಬ್ಬಂದಿಗಳು ಅತಿಕ್ರಮಣ ತೆರವುಗೊಳಿಸುತ್ತಿರುವುದಕ್ಕೆ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದರು.
ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ ಅಂತಾ ವಾದಿಸಿದರು. ಬಳಿಕ ಕೆಲವು ಅಂಗಡಿಗಳನ್ನು ತೆರವುಗೊಳಿಸಿದ್ದ ಪಾಲಿಕೆ ಸಿಬ್ಬಂದಿ, ಇನ್ನೂ ಕೆಲವರ ಮನವಿಗೆ ಒಪ್ಪಿ ಅಂಗಡಿ ತೆರವುಗೊಳಿಸದೆ ವಾಪಸ್ ತೆರಳಿದರು.