ETV Bharat / state

ಕಾಂಗ್ರೆಸ್​​​​ಗೆ ಮತ ಕೇಳುವ ನೈತಿಕತೆ ಇಲ್ಲ: ಶೋಭಾ ಕರಂದ್ಲಾಜೆ ತಿರುಗೇಟು

ಉಮೇಶ್​ ಜಾಧವ್​ 50 ಕೋಟಿಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್​ ಮುಖಂಡರ​ ಆರೋಪದ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಕೈ ಮುಖಂಡರೇ ನಮ್ಮ ಪಕ್ಷದ ಕಾರ್ಯಕರ್ತರನ್ನು ಖರೀದಿ ಮಾಡಲು ನಿಂತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ
author img

By

Published : May 15, 2019, 12:45 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್​ನವರ ಕೊಡುಗೆ ಶೂನ್ಯ. ಅವರಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ಮೈತ್ರಿ ಸರ್ಕಾರ ಬೀಳುತ್ತೆ ಅಂತಾ ನಾವು ಹೇಳಿಲ್ಲ, ನಿಮ್ಮ ಶಾಸಕರೇ ಹೇಳುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

ಉಮೇಶ್​ ಜಾಧವ್​ 50 ಕೋಟಿ ರೂ.ಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್​ನ​ ಆರೋಪದ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಶಾಸಕ ಉಮೇಶ್‌ ಜಾಧವ್​ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ದುಡ್ಡಿನ ಆಮಿಷಕ್ಕೆ ಒಳಗಾಗುವ ದರಿದ್ರ ಪರಿಸ್ಥಿತಿ ಬಂದಿಲ್ಲ ಎಂದರು.

ಕಾಂಗ್ರೆಸ್​ ಮುಖಂಡರ​ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ

ಮೈತ್ರಿ ಸರ್ಕಾರದ ಒಳ ಜಗಳದಿಂದಾಗಿ ಅವರು ಬಿಜೆಪಿಗೆ ಬಂದಿದ್ದಾರೆ. ಕಾಂಗ್ರೆಸ್​ನವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನು ಖರೀದಿ ಮಾಡಲು ನಿಂತಿದ್ದಾರೆ. ಅವರು ಖರೀದಿ ಮಾಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ಹರಿಹಾಯ್ದರು.

ಮೈತ್ರಿ ಸರ್ಕಾರದ ಶಾಸಕರು ಯಾವಾಗ ರಾಜೀನಾಮೆ ಕೊಡ್ತಾರೋ ಆವಾಗ ಅವರನ್ನ ಮಾತನಾಡಿಸುತ್ತೇವೆ. ನಾವು ಮೈತ್ರಿ ಸರ್ಕಾರವನ್ನು ಬೀಳಿಸುತ್ತೇವೆ ಅಂತ ಎಲ್ಲಿಯೂ ಹೇಳಿಲ್ಲ. ಅವರವರೇ ಕಚ್ಚಾಡಿಕೊಳ್ಳುತ್ತಿ ದ್ದಾರೆ. ಅವರ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ ಎಂದು ಪುನರುಚ್ಚರಿಸಿದರು.

Intro:ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ನೈತಿಕತೆ ಇಲ್ಲ: ಕರಂದ್ಲಾಜೆ

ಹುಬ್ಬಳ್ಳಿ-02
ರಾಜ್ಯದಲ್ಲಿ ಕಾಂಗ್ರೆಸ್ ನವರ ಕೊಡುಗೆ ಶೂನ್ಯ.ಕಾಂಗ್ರೆಸ್ ನವರಿಗೆ ಮತಕೇಳುವ ಯಾವುದೇ ನೈತಿಕತೆ ಇಲ್ಲ.ಮೈತ್ರಿ ಸರ್ಕಾರ ಬೀಳುತ್ತೆ ಅಂತಾ ನಾವು ಹೇಳಿಲ್ಲ, ನಿಮ್ಮ ಶಾಸಕರೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ಮಾತಿಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಉಮೇಶ ಜಾಧವ್ 50 ಕೋಟಿಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಮಾತನಾಡಿ, ಉಮೇಶ ಜಾಧವ್ ಅವರು ಶ್ರೀಮಂತ ಕುಟುಂಬದಿಂದ ಬಂದವರು.ಅವರಿಗೆ ದುಡ್ಡಿನ ಆಮೀಷಕ್ಕೆ ಒಳಗಾಗುವ ದರಿದ್ರ ಬಂದಿಲ್ಲ ಎಂದರು.
ಮೈತ್ರಿ ಸರ್ಕಾರದ ಒಳಜಗಳದಿಂದಾಗಿ ಅವರು ಬಿಜೆಪಿಗೆ ಬಂದಿದ್ದಾರೆ. ಡಿಕೆಶಿ ಅವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನ ಖರೀದಿ ಮಾಡಲು ನಿಂತಿದ್ದಾರೆ. ಅವರು ಖರೀದಿ ಮಾಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಡಿಕೆಸಿ ವಿರುದ್ಧ ಹರಿಹಾಯ್ದರು. ಆದರೆ ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ.ಮೈತ್ರಿ ಸರ್ಕಾರದ ಶಾಸಕರು ಯಾವಾಗ ರಾಜೀನಾಮೆ ಕೊಡುತ್ತಾರೆ ಆವಾಗ ಅವರನ್ನ ಮಾತನಾಡಿಸುತ್ತೆವೆ ಎಂದರು ಅವರು ಹೇಳಿದರು. ನಾವು ಮೈತ್ರಿ ಸರ್ಕಾರವನ್ನ ಬೀಳಿಸುತ್ತೇವೆ ಅಂತಾ ಎಲ್ಲಿಯೂ ಹೇಳಿಲ್ಲ.ಅವರವರೇ ಕಚ್ಚಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಅವರ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ.
ಮೈತ್ರಿ ಸರ್ಕಾರದ ಶಾಸಕರಲ್ಲೇ ಅಸಮಾಧಾನ ಇದೆ ಎಂದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.