ETV Bharat / state

ಕೊರೊನಾ ಮರಣ ಮೃದಂಗ : ಧಾರವಾಡ ಜಿಲ್ಲೆಯಲ್ಲಿ 3 ದಿನಗಳಲ್ಲಿ ಏಳು ಬಲಿ

author img

By

Published : Jul 9, 2020, 8:59 AM IST

ಕೋವಿಡ್​​​ನಿಂದಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏಳು ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಕೊರೊನಾ ಮರಣ ಮೃದಂಗ
ಕೊರೊನಾ ಮರಣ ಮೃದಂಗ

ಹುಬ್ಬಳ್ಳಿ : ಕೊರೊನಾ ವೈರಸ್ ಧಾರವಾಡ ಜಿಲ್ಲೆಯನ್ನ ಹೈರಾಣಾಗಿಸಿದೆ. ಮೊದ ಮೊದಲು ಬೆರಳೆಣಿಕೆಯಷ್ಟು ಇದ್ದ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಗ್ರಾಮೀಣ ಮಟ್ಟಕ್ಕೂ ಸೋಂಕು ಹರಡಿದ್ದು, ಆತಂಕವನ್ನುಂಟು ಮಾಡಿದೆ.

ಈ ಮಧ್ಯೆ ಕೋವಿಡ್ ನಿಂದಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏಳು ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕಿಮ್ಸ್‌ನಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯ ಏಳು ಜನರ ಮೃತಪಟ್ಟಿದ್ದಾರೆ.

ಪಿ- 28451 ( 65 ವರ್ಷ, ಪುರುಷ) ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು ಎಸ್ ಡಿ ಎಂ ಆಸ್ಪತ್ರೆಯಲ್ಲಿ ನಿನ್ನೆ ಜುಲೈ 7 ರಂದು ಮೃತಪಟ್ಟಿದ್ದಾರೆ. ಪಿ-28450 ( 62 ವರ್ಷ, ಪುರುಷ) ಹುಬ್ಬಳ್ಳಿ ನಗರದ ಮಂಟೂರು ರಸ್ತೆ ನಿವಾಸಿ ಜುಲೈ 5 ರಂದು ಮೃತಪಟ್ಟಿದ್ದಾರೆ.

ಪಿ- 28431 ( 85 ವರ್ಷದ ಮಹಿಳೆ) ಶಸ್ತ್ರಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಜುಲೈ 6 ರಂದು ಬಂದಿದ್ದರು, ಆಗ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ನಂತರ ಸಾವಿಗೀಡಾಗಿದ್ದಾರೆ. ಕೋವಿಡ್ ವರದಿ ಜುಲೈ 7 ರಂದು ಬಂದಿದೆ. ಪಿ-18713 ( 34 ವರ್ಷ, ಪುರುಷ) ನವಲಗುಂದ ತಾಲೂಕು ಶಿರಕೋಳದವರು ಜುಲೈ 6 ರಂದು ಮೃತಪಟ್ಟಿದ್ದಾರೆ. ಪಿ-20056 ( 65 ವರ್ಷ, ಪುರುಷ) ಮೊರಬ ಗ್ರಾಮದವರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು ಜುಲೈ 7 ರಂದು ಮೃತಪಟ್ಟಿದ್ದಾರೆ.

ಪಿ-28497 ( 70 ವರ್ಷ, ಪುರುಷ) ಹಾವೇರಿ ಜಿಲ್ಲೆಯವರು, ಜುಲೈ 5 ರಂದು ಮರಣ ಹೊಂದಿದ್ದಾರೆ. ಇವರಿಗೆ ಜುಲೈ 7 ರಂದು ಕೋವಿಡ್ ದೃಢಪಟ್ಟಿತ್ತು. ಪಿ-28461 (54 ವರ್ಷ, ಮಹಿಳೆ) ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದವರು, ತೀವ್ರ ಉಸಿರಾಟದ ತೊಂದರೆಯಿಂದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಜುಲೈ 6 ರಂದು ಮೃತಪಟ್ಟಿದ್ದಾರೆ.

ಇವರೆಲ್ಲರ ಪಾರ್ಥಿವ ಶರೀರಗಳನ್ನು ಜಿಪ್ ಉಳ್ಳ ಎರಡು ಲೇಯರ್ ಕವರ್ ಗಳಲ್ಲಿ ನಿಯಮಾನುಸಾರ ಮುಚ್ಚಿ, ಶವಸಂಸ್ಕಾರ ನಿರ್ವಹಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.