ಹುಬ್ಬಳ್ಳಿ : ಆಂಬ್ಯುಲೆನ್ಸ್ ಹಾಗೂ ಟೆಂಪೋ ನಡುವೆ ಮುಖಾಮಖಿ ಡಿಕ್ಕಿ ಹೊಡೆದ ಭೀಕರ ಅಪಘಾತ ದೇಶಪಾಂಡೆ ನಗರದ ಬಳಿ ಸಂಭವಿಸಿದೆ. ಪರಿಣಾಮ ಟೆಂಪೋದಲ್ಲಿದ್ದ ಎಂಟಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಎಲ್ಲರೂ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಯಲ್ಲಮ್ಮನ ಗುಡ್ಡದಿಂದ ದೇವರ ದರ್ಶನ ಮುಗಿಸಿ ವಾಪಸ್ ರಾಣೆಬೆನ್ನೂರಿಗೆ ಮರಳುವಾಗ ಗದಗದಿಂದ ಕಿಮ್ಸ್ ಗೆ ಬರುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಟೆಂಪೋ ನಡುವೆ ಮಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಎಂಟು ಜನ ಗಾಯಗೊಂಡಿದ್ದಾರೆ. ಗದಗದಿಂದ ಆಂಬ್ಯುಲೆನ್ಸ್ನಲ್ಲಿ ಕರೆತಂದಿದ್ದ ವ್ಯಕ್ತಿಯನ್ನು ಸಹ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ರಸ್ತೆ ಅಪಘಾತ ಬೈಕ್ ಸವಾರ ಸಾವು: ಉಣಕಲ್ ಕ್ರಾಸ್ ಬಳಿ ಘಟನೆ.. ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಉಣಕಲ್ ಕ್ರಾಸ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಹೋಗುತ್ತಿದ್ದ ವೇಳೆಯಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೆ ತುತ್ತಾಗಿದ್ದು, ವಯೋ ವೃದ್ಧನೋರ್ವ ರಸ್ತೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಬಗ್ಗೆ ಹಾಗೂ ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ಪ್ರೇಮಿಗಳ ದಿನದಂದು ನಂದಿ ಬೆಟ್ಟದಲ್ಲಿ ಯುವಕ ಆತ್ಮಹತ್ಯೆ.. ಏನೇ ಕಷ್ಟ ಇದ್ದರೂ ಎದುರಿಸುವ ಛಲ ಇರಬೇಕು ಎಂದ ನಟ ಉಪೇಂದ್ರ