ಹುಬ್ಬಳ್ಳಿ : ಕೊರೊನಾ ವೈರಸ್ ತಡೆಗಟ್ಟಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆಸಲಾಯಿತು.
ಕೊರೊನಾ ಸಾಂಕ್ರಾಮಿಕ ಸೋಂಕು ನಿಯಂತ್ರಣಕ್ಕೆ ಯುದ್ದೋಪಾದಿಯಲ್ಲಿ ಕೆಲಸ ಮಾಡುವುದು ಅಗತ್ಯ, ಅಲ್ಲದೇ ಹುಬ್ಬಳ್ಳಿ-ಧಾರವಾಢ ನಗರಗಳಲ್ಲಿ ಸ್ಟೇರ್ ಲೈಜ್ ಮಷಿನ್ ಖರೀದಿ ಮಾಡಬೇಕು. ಪಾಲಿಕೆಯ ಎಲ್ಲ ವಾರ್ಡ್ ಗಳಲ್ಲೂ ಮೇಲಿಂದ ಮೇಲೆ ಕೆಮಿಕಲ್ಸ್ ಸಿಂಪಡಣೆ ಮಾಡುವಂತೆ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಪಾಲಿಕೆ ಆಯುಕ್ತ ಸುರೇಶ್ ಹಿಟ್ನಾಳ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಸ್ಲಂ ಪ್ರದೇಶಗಳಿಗೆ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು, ಜನರಿಗೆ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಪಡಿತರ ವಿತರಣೆ ವೇಳೆಯಲ್ಲಿ ಜನರು ಒಂದೆಡೆ ಸೇರದಂತೆ ಕ್ರಮ ವಹಿಸಬೇಕು ಹಾಗಾಗಿ ಪಡಿತರವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಪಾಲಿಕೆ ಆಯುಕ್ತ ಡಾ.ಸುರೇಶ ಹಿಟ್ನಾಳ ಸೇರಿದಂತೆ ಆರೋಗ್ಯ ಇಲಾಖೆ ಸೇರಿದಂತೆ 30 ಕ್ಕೂ ಹೆಚ್ಚು ಅಧಿಕಾರಿಗಳು ಇದ್ದರು.