ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡು ಇನ್ನೇನು ಎಲ್ಲವೂ ಸುಸೂತ್ರವಾಗಿ ನಡೆಯಿತು ಎನ್ನುತ್ತಿರುವಾಗಲೇ ಸಾವರ್ಕರ್ ಫೋಟೋ ವಿವಾದದ ಸ್ವರೂಪ ಪಡೆದುಕೊಂಡಿದೆ. ಪಾಲಿಕೆ ಆಯುಕ್ತರ ಆದೇಶ ಉಲ್ಲಂಘಿಸಿ ಸಾವರ್ಕರ್ ಫೋಟೋ ಮತ್ತು ಫ್ಲೆಕ್ಸ್ ಹಾಕಲಾಗಿದ್ದು, ಪರ–ವಿರೋಧ ಅಭಿಪ್ರಾಯಗಳು ಬಂದಿವೆ.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಹೈಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಕೆಲ ನಿಯಮಗಳನ್ನು ಹಾಕಿ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಆದೇಶ ಹೊರಡಿಸಿದ್ದರು. ಆದರೆ ಗಣೇಶ ಪ್ರತಿಷ್ಠಾಪನೆಯ ಜವಾಬ್ದಾರಿ ಹೊತ್ತ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ.
ಪಾಲಿಕೆ ವಿಧಿಸಿದ್ಧ ನಿಬಂಧನೆಗಳನ್ನು ಉಲ್ಲಂಘಿಸಿದ ಗಣೇಶ ಮಹಾಮಂಡಳಿ ಸಾವರ್ಕರ್ ಫ್ಲೆಕ್ಸ್ ಜೊತೆಗೆ ಗಣೇಶ ಮೂರ್ತಿ ಬಳಿಯೂ ಸಾವರ್ಕರ್ ಫೋಟೋ ಇಟ್ಟಿದ್ದಾರೆ. ಇದು ಮುಂದಿನ ವರ್ಷ ಅನುಮತಿ ನೀಡಲು ತೊಡಕಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಗಣೇಶೋತ್ಸವ: ಗಮನ ಸೆಳೆದ ತಿಲಕ್, ಸಾವರ್ಕರ್ ಥೀಮ್ ಗಜಾನನ