ಧಾರವಾಡ: ಬೆಳಗಾವಿಯ ಪೀರನವಾಡಿ ವಿವಾದವನ್ನು ಜಿಲ್ಲಾಡಳಿತವೇ ಬಗೆಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಎರಡು ಸಮುದಾಯಗಳ ಮಧ್ಯೆ ಸಮಸ್ಯೆಯಿದೆ. ಸ್ಥಳೀಯವಾಗಿಯೇ ಇದನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.
ಇದನ್ನು ನಾನು ನಿನ್ನೆಯೇ ಹೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು, ಡಿಸಿ ಸೇರಿ ಈ ವಿವಾದ ಬಗೆಹರಿಸಬೇಕು. ಎಲ್ಲರೂ ಸೇರಿ ಸಂಧಾನ ಮಾಡಿದರೆ ಒಳ್ಳೆಯದು. ಎಲ್ಲರನ್ನು ಕರೆದು ಸಂಧಾನ ಮಾಡಿದರೆ ಸಮಸ್ಯೆ ಮುಗಿಯುತ್ತೆ. ಸಮುದಾಯಗಳ ಮುಖಂಡರು, ಎಲ್ಲಾ ಶಾಸಕರನ್ನು ಕರೆಯುವಂತೆ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.