ಹುಬ್ಬಳ್ಳಿ: ಬಹುದಿನದ ನಿರೀಕ್ಷಿತ ಬೆಳಗಾವಿ - ಕಿತ್ತೂರು - ಧಾರವಾಡ ರೈಲ್ವೆ ಮಾರ್ಗಕ್ಕೆ ಇಂದು ರೈಲ್ವೆ ಮಂತ್ರಾಲಯದಿಂದ ಅನುಮೋದನೆ ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತೋಷ ಹಂಚಿಕೊಂಡಿದ್ದಾರೆ.
![central railway deparment agreed belgavi-dharwad-kittur railway yojana](https://etvbharatimages.akamaized.net/etvbharat/prod-images/kn-hbl-07-dharawd-belagav-rail-av-7208089_07092020221236_0709f_1599496956_815.png)
ಫೇಸ್ಬುಕ್ ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸುಮಾರು 927.40 ಕೋಟಿ ವೆಚ್ಚದ ಈ ಯೋಜನೆಗೆ ನಾನು ಹಲವಾರು ವರ್ಷಗಳಿಂದ ಪ್ರಯತ್ನಿಸಿದ್ದು, ಇಂದು ಅನುಮೋದನೆ ದೊರೆತಿದ್ದು ತುಂಬಾ ತೃಪ್ತಿ ನೀಡಿದೆ ಎಂದಿದ್ದಾರೆ.
![sanction of new railway line](https://etvbharatimages.akamaized.net/etvbharat/prod-images/kn-hbl-07-dharawd-belagav-rail-av-7208089_07092020221236_0709f_1599496956_896.jpg)