ಹುಬ್ಬಳ್ಳಿ: ಎಲ್ಲಾ ವಿಚಾರಗಳನ್ನು ಮಾಧ್ಯಮ ಎದುರು ಹೇಳಲ್ಲ. ಸಮಯ ಸಂದರ್ಭದಲ್ಲಿ ಎಲ್ಲಾ ಹೇಳುತ್ತೇನೆ. ವೇಟ್ ಆ್ಯಂಡ್ ಸಿ. ನನಗೆ ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಯಾರು ಮಾತನಾಡಲು ಹೇಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಸ್. ಆರ್. ಪಾಟೀಲ್ ಹೇಳಿದರು.
ಸಿಎಂ ಇಬ್ರಾಹಿಂ ಮತ್ತು ಎಸ್. ಆರ್ ಪಾಟೀಲ್ ಮಾತುಕತೆ ಮುಕ್ತಾಯದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸ್ವ ಇಚ್ಛೆಯಿಂದ ಮತ್ತು ಪಕ್ಷದ ಹಿತದೃಷ್ಟಿಯಿಂದ ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೇನೆ. ಇಬ್ರಾಹಿಂ ಅವರು ಪ್ರತಿಪಕ್ಷ ನಾಯಕನಾಗುವ ಆಸೆಯಿಟ್ಟುಕೊಂಡಿದ್ದರು. ಅವರು ಪಕ್ಷದಲ್ಲಿರಬೇಕು ಅಂತ ಮನವಿ ಮಾಡಿದ್ದೇನೆ. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ. ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ನನಗೆ ಸದ್ಯ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಚುನಾವಣೆ ಸಮಯದಲ್ಲಿ ಒಬ್ಬ ಕಾರ್ಯಕರ್ತ ಪಕ್ಷ ಬಿಟ್ಟು ಹೋಗಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಎಂಎಲ್ಸಿ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಬಹಳಷ್ಟು ವಿಚಾರವಾಗಳ ಬಗ್ಗೆ ಧ್ವನಿ ಎತ್ತಿದ್ದೆ. ಆದರೆ, ನಮ್ಮ ಪಕ್ಷದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ನನಗೆ ಮಾಡಿದ ಅನ್ಯಾಯಕ್ಕಿಂತ ನಮ್ಮ ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯ ಎಂದು ಹೇಳಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ