ETV Bharat / state

ವಿವಾದಕ್ಕೆ ಕಾರಣವಾದ ಕಿಮ್ಸ್​ ಆವರಣದ ಆರ್​ಎಸ್​ಎಸ್​ ಕೊರೊನಾ ಸಹಾಯವಾಣಿ ಕೇಂದ್ರ - RSS Corona Helpline

ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಆರ್​ಎಸ್ಎಸ್ ಕೊರೊನಾ ಸಹಾಯವಾಣಿ ಕೇಂದ್ರವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದೆ.

Hubli
ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಮನವಿ
author img

By

Published : May 4, 2021, 8:59 AM IST

Updated : May 4, 2021, 9:12 AM IST

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆರ್​ಎಸ್ಎಸ್ ಕೊರೊನಾ ಸಹಾಯವಾಣಿ ಕೇಂದ್ರ ಆರಂಭಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಸಹಾಯವಾಣಿ‌ ಕೇಂದ್ರವನ್ನು ಕಿಮ್ಸ್​ನಿಂದ ತೆರವುಗೊಳಿಸುವದರ ಜೊತೆಗೆ ಕಿಮ್ಸ್ ನಿರ್ದೇಶಕರ ಮೇಲೆ ಕ್ರಮ ತಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್ ಮನವಿ

ಆರ್​ಎಸ್ಎಸ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಪಿತೃ ಪಕ್ಷವಾಗಿದೆ. ಈ ಸಂಘಟನೆಯ ಸೇವಾ ಭಾರತೀಯ ಟ್ರಸ್ಟಿನ ಮುಖಾಂತರ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಾದ ಕಿಮ್ಸ್ ಆಸ್ಪತ್ರೆಯಲ್ಲಿ, ಆರ್​ಎಸ್ಎಸ್ ಕೊರೊನಾ ಸಹಾಯವಾಣಿಯನ್ನು ಆರಂಭಿಸಿದ್ದು ಖಂಡನೀಯವಾಗಿದೆ. ಸರ್ಕಾರಿ ಆಸ್ತಿಯಲ್ಲಿ ಒಂದು ಪಕ್ಷಕ್ಕೆ ಸಂಬಂಧಿತ ಸಂಘನೆಯ ಸಹಾಯವಾಣಿ ತೆಗೆದಿರುವುದು ಆಕ್ಷೇಪಾರ್ಹವಾಗಿದೆ. ಈ ಸಹಾಯವಾಣಿ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂತರ್ತಾನಿಯವರು ಅತಿಥಿಗಳಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆರ್​ಎಸ್ಎಸ್​ನವರು ಸರ್ಕಾರಿ ಆಸ್ತಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರವನ್ನು ತೆರವುಗೊಳಿಸಲು ಆದೇಶ ನೀಡಬೇಕು ಎಂದು ಮನವಿ ಸಲ್ಲಿಸಿದೆ.

ಕ್ರಮ ಕೈಗೊಳ್ಳದಿದ್ದರೆ ಇದರ ವಿರುದ್ಧ ನಾವು ನ್ಯಾಯಾಂಗ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

Last Updated : May 4, 2021, 9:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.