ಹುಬ್ಬಳ್ಳಿ: ನಗರದ ಹೆಗ್ಗೇರಿ ಆಯುರ್ವೇದಿಕ್ ಕಾಲೇಜಿನ ಹೆಸರಲ್ಲಿ ನಕಲಿ ಖಾತೆ ತೆರೆದು 24 ಲಕ್ಷ ರೂಪಾಯಿಯನ್ನ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಯುರ್ವೇದಿಕ್ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ತೆರೆದಿರುವ ಹಿಂದುಳಿದ ವರ್ಗದ ಇಲಾಖೆಯ ಸಿಬ್ಬಂದಿವೋರ್ವ, ವಿದ್ಯಾರ್ಥಿ ವೇತನವನ್ನ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ ಎನ್ನಲಾಗ್ತಿದೆ.
2017-18ರಲ್ಲಿನ ಪ್ರಕರಣ ಇದಾಗಿದ್ದು, ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮಾ ಮಾಡುವ ಬದಲು, ನಕಲಿ ಖಾತೆಗೆ ಜಮಾ ಮಾಡಿ ವಂಚನೆ ಮಾಡಲಾಗಿದೆ. ವಿದ್ಯಾರ್ಥಿಗಳ ಒಟ್ಟು 24 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.