ಹುಬ್ಬಳ್ಳಿ: ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದಂತಾಗಿದೆ. ಈ ನಡುವೆ ಬಂಧಿತರಿಬ್ಬರು ಬಚ್ಚಾಖಾನ್ ಸಹಚರರು ಎನ್ನಲಾಗಿದೆ.
ಮೈಸೂರಿನ ಶಿವರಾತ್ರಿಶೇಶ್ವನಗರದ ಬನ್ನಿಮಂಟಪ ಲೇಔಟ್ನ ಶಹಜಾನ ಕೆ.ಆಶ್ರಫ್ (24) ಹಾಗೂ ಮೈಸೂರಿನ ಗಾಂಧಿನಗರದ ಸೈಯದ್ ಸೋಹೈಲ್ ಪೀರ ಸೈಯದ್ ಆಜೀಮ್ ಪೀರ (22) ಬಂಧಿತರು. ಬಂಧಿತರಿಂದ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.