ETV Bharat / state

ಈಗಲಾದ್ರೂ ಸಚಿವರೆಲ್ಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಬೇಕು- ಮಾಜಿ ಸಚಿವ ಹೆಚ್‌ ಡಿ ರೇವಣ್ಣ

ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜಿಲ್ಲೆಯ ಅಳ್ನಾವರ ಪ್ರದೇಶದ ಪ್ರವಾಹ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ‌ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

ನೂತನ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿ
author img

By

Published : Aug 20, 2019, 7:07 PM IST

Updated : Aug 20, 2019, 8:34 PM IST

ಧಾರವಾಡ: ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜಿಲ್ಲೆಯ ಅಳ್ನಾವರ ಪ್ರದೇಶದ ಪ್ರವಾಹದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ‌ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

ಅಳ್ನಾವರ ಪಟ್ಟಣದ ಪ್ರವಾಹ ಸ್ಥಳಗಳಿಗೆ ಭೇಟಿ‌ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 374 ಹಳ್ಳಿಗಳು ಸಂಪೂರ್ಣವಾಗಿ ಹಾನಿಯಾಗಿವೆ. ಖಾನಾಪುರ ತಾಲೂಕುವೊಂದರಲ್ಲೇ 10 ಸಾವಿರ ಮನೆ ಬಿದ್ದಿವೆ. ಹಳ್ಳಿಗೆ ಹಳ್ಳಿಗಳೇ ನಾಶವಾಗಿವೆ. ಇವತ್ತಿನವರೆಗೂ ಬಿಡಿಗಾಸು ಬಂದಿಲ್ಲ. ನಿನ್ನೆಯಷ್ಟೇ ಸರ್ಕಾರ, ಒಂದು ಕುಟುಂಬಕ್ಕೆ ಹತ್ತು ಸಾವಿರ ಕೊಡುವ ಆದೇಶ ಮಾಡಿದೆ. 5 ಲಕ್ಷ ಕೊಡ್ತೇವಿ, ಬಾಡಿಗೆ ಕೊಡ್ತೇನಿ ಅಂತಿದಾರೆ. ಆ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಇಷ್ಟು ದಿನ ಪಾಪ ಯಡಿಯೂರಪ್ಪ ಒಂಟಿಯಾಗಿ ತಿರುಗುತ್ತಿದ್ದರು. ಈಗ ಮಂತ್ರಿಮಂಡಲ ರಚನೆಯಾಗಿದೆ. ಈ 17 ಜನ ಮಂತ್ರಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ನೂತನ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿ

ಆಯಾ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಕುಳಿತು ಪರಿಹಾರದ ಬಗ್ಗೆ ಸಭೆ ಮಾಡಬೇಕು. ಹಿಂದೆಲ್ಲ‌ ಮನೆ ಬಿದ್ದರೆ 5-10 ಸಾವಿರ ಕೊಡುತ್ತಿದ್ದರು. ಕುಮಾರಸ್ವಾಮಿ ಸರ್ಕಾರ ಬಂದ ಮೇಲೆ ಅದು ಬದಲಾಗಿದೆ. ಸರ್ಕಾರ ಈಗ ಕಾನೂನು ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕಾನೂನು ಸಡಿಲ ಮಾಡಿ ನೊಂದ ಕುಟುಂಬಗಳನ್ನು ಉಳಿಸಬೇಕು ಎಂದು ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರ ಐದಾರು ಸಾವಿರ ಕೋಟಿ ಕೊಡಬೇಕು. ಬೇರೆ ರಾಜ್ಯಕ್ಕೆ ಹೆಚ್ಚು ಕೊಟ್ಟಿದಾರೆ ಅಂತಾ ಕೆಲವರು ಹೇಳುತ್ತಿದ್ದಾರೆ. ಅದರ ಬಗ್ಗೆ ಮಾತನಾಡಲಾರೆ. ಕೇಂದ್ರ ಸರ್ಕಾರದ ಹಣಕ್ಕೆ ಕಾಯದೇ ರಾಜ್ಯ ಸರ್ಕಾರ ಪರಿಹಾರ ಹಣ ಖರ್ಚು ಮಾಡಬೇಕು.‌ ನಿರಾಶ್ರಿತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಕೊಟ್ಟು ಅವರ ವಿಶ್ವಾಸ ಗಳಿಸಬೇಕು ಎಂದರು.

ಸಚಿವ ಸಂಪುಟದಲ್ಲಿ ಕೆಲ ಭಾಗ ನಿರ್ಲಕ್ಷ್ಯ ವಿಚಾರಕ್ಕೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣಕನ್ನಡ ಬಗ್ಗೆ ಪ್ರಶ್ನೆ ಮಾಡಲಾರೆ. ಈ ಭಾಗದ ನೊಂದ ಜನಕ್ಕೆ ಮಂತ್ರಿಗಳಿಗೆ ಆಯಾ ಜಿಲ್ಲೆಗಳನ್ನು ವಹಿಸಬೇಕು. ನೊಂದ ಜನರ ಅಹವಾಲು ಸ್ವೀಕರಿಸುವಂತಾಗಬೇಕು. ಕಾರ್ಯದರ್ಶಿಗಳು ಬೆಂಗಳೂರಿನಲ್ಲೆ ಇರಬಾರದು ಎಂದರು.

15 ಜನ ಕಾರ್ಯದರ್ಶಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದಿಂದ ನೆರವು ಪಡೆಯಲು ಸರ್ವ ಪಕ್ಷ ನಿಯೋಗ ಒಯ್ಯಬೇಕು.‌ ಇದಕ್ಕಾಗಿ ಸಿಎಂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಬೇಕು. ಕುಮಾರಸ್ವಾಮಿ ಉತ್ತರ ಕರ್ನಾಟಕ ನೋಡಲಿಲ್ಲ ಎಂಬ ಆರೋಪ ಇತ್ತು ನಾವು ಮಾಡಲು ಆಗಿಲ್ಲ ಅಂತಾದ್ರೆ, ಉತ್ತರಕರ್ನಾಟಕ್ಕೆ ಇವರಾದ್ರೂ ಒಳ್ಳೇ ಕೆಲಸ ಮಾಡಲಿ ಎಂದು ಕುಟುಕಿದರು.

Intro:ಧಾರವಾಡ: ರಾಜ್ಯದಲ್ಲಿ ಸುಮಾರು ೧೩ ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಒಂದು ಕಡೆ ಮಳೆ ಹಾನಿಯಾಗಿದ್ರೆ ಇನ್ನೊಂದು ಕಡೆ ಅತೀ ಹೆಚ್ಚು ನೀರಿನಿಂದ ಹಾನಿಯಾಗಿದೆ. ಧಾರವಾಡ ಜಿಲ್ಲೆ ಅಳ್ನಾವರ ಪ್ರದೇಶದ ಪ್ರವಾಹ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ..ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಪ್ರವಾಹ ಸ್ಥಳಗಳಿಗೆ ಭೇಟಿ‌ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆಯಿಂದ ಮೂರ ಲಕ್ಷ ಜನ ಪುನರ್ವಸತಿ ಕೇಂದ್ರಗಳಲ್ಲಿ ಇದಾರೆ. ಅಳ್ನಾವರದಲ್ಲಿ ದೋಬಿ ಸಮಾಜದ ಕುಟುಂಬದ ಕಷ್ಟ ನೋಡಿದೆ. ಆ ಕುಟುಂಬದ ಮಹಿಳೆಯ ಕಣ್ಣೀರು ನೋಡಿದೆ. ಸುಮಾರು 374 ಹಳ್ಳಿಗಳೇ ಸಂಪೂರ್ಣವಾಗಿ ಹಾನಿಯಾಗಿವೆ. ಖಾನಾಪುರ ತಾಲೂಕುವೊಂದರಲ್ಲೇ 10 ಸಾವಿರ ಮನೆ ಬಿದ್ದಿವೆ ಎಂದು ಮಾಹಿತಿ‌ ನೀಡಿದರು.

ಹಳ್ಳಿಗೆ ಹಳ್ಳಿಗಳೇ ನಾಶವಾಗಿವೆ. ಇವತ್ತಿನವರೆಗೂ ಬಿಡಿಗಾಸು ಬಂದಿಲ್ಲ, ನಿನ್ನೆಯಷ್ಟೇ ಸರ್ಕಾರಿ ಆದೇಶವೊಂದು ಮಾಡಿದಾರೆ. ಒಂದು ಕುಟುಂಬಕ್ಕೆ ಹತ್ತು ಸಾವಿರ ಕೊಡುವ ಆದೇಶ ಮಾಡಿದ್ದಾರೆ. ಐದು ಲಕ್ಷ ಕೊಡ್ತೇವಿ, ಬಾಡಿಗೆ ಕೊಡ್ತೇನಿ ಅಂತಿದಾರೆ ಆ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಇಷ್ಟು ದಿನ ಪಾಪ ಯಡಿಯೂರಪ್ಪ ಒಂಟಿಯಾಗಿ ತಿರುಗುತ್ತ ಇದ್ದರೂ ಈಗ ಮಂತ್ರಿ ಮಂಡಳ ರಚನೆಯಾಗಿದೆ. ಈ ೧೭ ಜನ ಮಂತ್ರಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಆಯಾ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಕುಳಿತು ಪರಿಹಾರದ ಬಗ್ಗೆ ಸಭೆ ಮಾಡಬೇಕು. ಹಿಂದೆಲ್ಲ‌ ಮನೆ ಬಿದ್ದರೆ ಐದತ್ತು ಸಾವಿರ ಕೊಡೊದು ಇತ್ತು, ಕುಮಾರಸ್ವಾಮಿ ಸರ್ಕಾರ ಬಂದ ಮೇಲೆ ಅದು ಬದಲಾಗಿದೆ. ಸರ್ಕಾರ ಈಗ ಕಾನೂನು ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕಾನೂನು ಸಡಿಲ ಮಾಡಿ ನೊಂದ ಕುಟುಂಬಗಳನ್ನು ಉಳಿಸಬೇಕು ಎಂದು ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರ ಐದಾರು ಸಾವಿರ ಕೋಟಿ ಕೊಡಬೇಕು. ಬೇರೆ ರಾಜ್ಯಕ್ಕೆ ಹೆಚ್ಚು ಕೊಟ್ಟಿದಾರೆ ಅಂತಾ ಕೆಲವರು ಹೇಳುತ್ತಿದ್ದಾರೆ. ಅದರ ಬಗ್ಗೆ ಮಾತನಾಡಲಾರೆ. ಕೇಂದ್ರ ಸರ್ಕಾರದ ಹಣಕ್ಕೆ ಕಾಯದೇ ರಾಜ್ಯ ಸರ್ಕಾರ ಪರಿಹಾರ ಹಣ ಖರ್ಚು ಮಾಡಬೇಕು.‌ ನಿರಾಶ್ರಿತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಕೊಟ್ಟು ಅವರ ವಿಶ್ವಾಸ ಗಳಿಸಬೇಕು ಎಂದರು.

ಸಚಿವ ಸಂಪುಟದಲ್ಲಿ ಕೆಲ ಭಾಗ ನಿರ್ಲಕ್ಷ್ಯ ವಿಚಾರಕ್ಕೆ ಮಾತನಾಡಿದ ಅವರು, ಹೈದ್ರಾಬಾದ ಕರ್ನಾಟಕ, ಮಧ್ಯ ಕರ್ನಾಟಕ, ದಕ ಬಗ್ಗೆ ಪ್ರಶ್ನೆ ಮಾಡಲಾರೆ. ಈ ಭಾಗದ ನೊಂದ ಜನಕ್ಕೆ ಮಂತ್ರಿಗಳಿಗೆ ಆಯಾ ಜಿಲ್ಲೆಗಳನ್ನು ವಹಿಸಬೇಕು. ನೊಂದ ಜನರ ಅಹವಾಲು ಸ್ವೀಕರಿಸುವುದಾಗಬೇಕು. ಕಾರ್ಯದರ್ಶಿಗಳು ಬೆಂಗಳೂರಿನಲ್ಲೆ ಇರಬಾರದು ಎಂದರು.

15 ಜನ ಕಾರ್ಯದರ್ಶಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದಿಂದ ನೆರವು ಪಡೆಯಲು ಸರ್ವ ಪಕ್ಷ ನಿಯೋಗ ಒಯ್ಯಬೇಕು.‌ ಇದಕ್ಕಾಗಿ ಸಿಎಂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಬೇಕು. ಕುಮಾರಸ್ವಾಮಿ ಉತ್ತರ ಕರ್ನಾಟಕ ನೋಡಲಿಲ್ಲ ಎಂಬ ಆರೋಪ ಇತ್ತು ನಾವು ಮಾಡಲು ಆಗಿಲ್ಲ ಅಂತಾದ್ರೆ ಉಕವನ್ನು ಇವರಾದ್ರೂ ನೋಡಲಿ ಎಂದು ಕುಟುಕಿದರು.Body:ನಾವು ಈ ಭಾಗದಲ್ಲಿ 25 ಸಾವಿರ ಕೋಟಿಯಷ್ಟು ಸಾಲಮನ್ನಾ ಮಾಡಿದ್ದೇವೆ. ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಯಾವ ಕಾರಣಕ್ಕೆ ತಪ್ಪಿಸಿದರು ಗೊತ್ತಿಲ್ಲ, ಅವರು ನಮ್ಮ ಅಧಿಕಾರದ ಕಾಲದಲ್ಲಿಯೂ ಕೆಲಸ ಮಾಡಿದವರಿದ್ದರು. ಉಮೇಶ ಕತ್ತಿ ದೇವೇಗೌಡರ ಕಾಲದವರು ಅವರ ಒಂದು ಅನುಭವ ಈ ರಾಜ್ಯಕ್ಕೆ ಬೇಕಿದೆ. ಅವರು ಮಂತ್ರಿಯಾಗಬೇಕಿತ್ತು ಎಂದರು.

ಅವರಿಗೆ ಯಾವ ಕಾರಣಕ್ಕೆ ತಪ್ಪಿಸಿದರು ಗೊತ್ತಿಲ್ಲ, ಅವರ ಪಕ್ಷದ ವಿಚಾರ ಅವರೇ ಹೇಳಬೇಕು. ಈ ಸರ್ಕಾರ ಎಷ್ಟು ದಿನ ಇರಬಲ್ಲದು ಅಂತಾ ನಾನು ಹೇಳಲಾರೆ. ಯಾಕಂದ್ರೆ ಅದನ್ನು ಹೇಳಲು ಅವರ ಜ್ಯೋತಿಷಿ ಬೇರೆ ಇದಾರೆ. ಮನುಷ್ಯರಿಗೆ ಆಪರೇಷನ್ ಮಾಡುವುದು ಗೊತ್ತಿತ್ತು, ಆದರೆ ಬಿಜೆಪಿಯ ಅಪರೇಷನ್ ಇದು ಬೇರೆಯದೇ ಅವರೇ ಕೇಳಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಈ ಬಗ್ಗೆ ಜಗದೀಶ ಶೆಟ್ಟರಗೆ ಕೇಳ ಬಯಸುವೆ. ಸಿಎಂ ಆದವರು ಒಬ್ಬರು ಪಾಠ ಹೇಳಲು ಬೇಕಿತ್ತು ಅದಕ್ಕೆ ಶೆಟ್ಟರಗೆ ಮಂತ್ರಿ ಸ್ಥಾನ ಕೊಟ್ಟಿರಬಹುದು. ಯಾಕಂದ್ರೆ ಸಿಎಂ ಬ್ಯುಸಿ ಇರ್ತಾರೆ ಅದಕ್ಕಾಗಿ ಶೆಟ್ಟರಗೆ ಪಾಠ ಹೇಳೊದಕ್ಕೆ ಮಂತ್ರಿ ಮಾಡಿರಬಹುದು ಎಂದು‌ ವ್ಯಂಗ್ಯವಾಡಿದರು.Conclusion:
Last Updated : Aug 20, 2019, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.