ETV Bharat / state

ಡಿಜೆ ಹಚ್ಚಂಗಿಲ್ಲ..ಡ್ಯಾನ್ಸ್ ಮಾಡಂಗಿಲ್ಲ.. ಹುಬ್ಬಳ್ಳಿಯಲ್ಲಿ ಸಿಂಪಲ್ ನ್ಯೂ ಇಯರ್

ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ‌ ಮಾಡಲು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಸೂಚನೆ ನೀಡಲಾಗಿದ್ದು, ನಿಯಮ‌ ಉಲ್ಲಂಘಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹು-ಧಾ ಮಹಾನಗರ ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

Restriction Notice of New Year celebration
ಹೊಸ ವರ್ಷದ ಆಚರಣೆ
author img

By

Published : Dec 31, 2020, 7:53 PM IST

ಹುಬ್ಬಳ್ಳಿ: ಹೊಸ ವರ್ಷದ ಆಚರಣೆಗೆ ಕೊರೊನಾ ಕರಿನೆರಳು ಬಿದ್ದಿದ್ದು, ಹುಬ್ಬಳ್ಳಿ ಜನರ ಜೋಶ್​ಗೆ ಬ್ರೇಕ್ ಹಾಕಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್​ಗಳಲ್ಲಿ ಹೊಸ ವರ್ಷ ಆಚರಣೆ ಸಂಭ್ರಮವಂತೂ ಮನೆ ಮಾಡಿರುತ್ತಿತ್ತು. ಆದ್ರೆ ಈ ವರ್ಷ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಹೊಸ ವರ್ಷಾಚರಣೆ ವಿಚಾರವಾಗಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಡಿಜೆ ಹಚ್ಚಂಗಿಲ್ಲ..ಡ್ಯಾನ್ಸ್ ಮಾಡಂಗಿಲ್ಲ..ಸಿಂಪಲ್ ನ್ಯೂ ಇಯರ್ ಆಚರಣೆ ಮಾಡಿ ಮನೆಯಲ್ಲಿಯೇ ಇರಿ

ಈಗಾಗಲೇ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ಹೋಟೆಲ್​ಗಳ ಮಾಲೀಕರನ್ನ ಕರೆದು ಸಭೆ ಮಾಡಿದ್ದಾರೆ. ಕೋವಿಡ್ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದು, ಯಾರಾದರೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ರೆ, ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದು, ಎಂದಿನಂತೆ ರಾತ್ರಿ 11 ಗಂಟೆಗೆ ಎಲ್ಲವೂ ಕ್ಲೋಸ್ ಆಗಬೇಕು. ಡಿಜೆ, ಸಾಮೂಹಿಕ ಪಾರ್ಟಿ ನಡೆಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹು-ಧಾ ಮಹಾನಗರದಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರ ನಿರ್ದೇಶನದಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಸಾಮೂಹಿಕ ಹೊಸ ವರ್ಷಾಚರಣೆ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ‌ ಮಾಡಲು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಹು-ಧಾ ಮಹಾನಗರ ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲದಂತಾಗಿದ್ದು, ಕೋವಿಡ್ ನಿಯಮ ಚಾಚೂ ತಪ್ಪದೇ ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಬಾರಿ ಸಂಭ್ರಮವಿಲ್ಲದ ಹೊಸ ವರ್ಷಾಚರಣೆ ಮಾಡುವಂತಾಗಿದ್ದು, ಎಂದಿನಂತೆ ರಾತ್ರಿ 11ರ ವರೆಗೆ ಮಾತ್ರ ತಾರಾ ಹೋಟೆಲ್​ಗಳು ಓಪನ್ ಇರಲಿದ್ದು, ಸಾಮೂಹಿಕ ಕುಣಿತ, ಕುಡಿತಕ್ಕೆ ಬ್ರೇಕ್ ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.