ಧಾರವಾಡ: ಕೊರೊನಾ ನಿಯಂತ್ರಣದಲ್ಲಿ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ನಾಳೆಯಿಂದ ಎಲ್ಲಾ ಜನಪ್ರತಿನಿಧಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾರೂ ಇನ್ಮುಂದೆ ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲ. ನಾಳೆಯಿಂದ ನಾನೂ ಮಾತನಾಡುವುದಿಲ್ಲ. ಸಂಬಂಧಿಸಿದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಮಾತನಾಡುತ್ತಾರೆ. ಕೊರೊನಾ ವಿಷಯದಲ್ಲಿ ಕೆಲವೊಂದು ಗೌಪ್ಯತೆ ಕಾಪಾಡಬೇಕಿದೆ. ಹೀಗಾಗಿ ನಮಗೆ ಮಾತನಾಡದಂತೆ ನಿರ್ದೇಶನಗಳು ಬಂದಿವೆ ಎಂದರು.
ಪ್ರಧಾನಿ ಕಚೇರಿಯಿಂದ ರಾಜ್ಯದವರೆಗೆ ಈ ವ್ಯವಸ್ಥೆ ಬರಲಿದೆ. ಎಲ್ಲವನ್ನೂ ಮೇಲ್ಮಟ್ಟದಲ್ಲಿಯೇ ನಿಯಂತ್ರಿಸುತ್ತಾರೆ ಎಂದರು.