ಹುಬ್ಬಳ್ಳಿ: ಚುನಾವಣೆ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿಯಾಗಿದ್ದರಿಂದ ನಮ್ಮೆಲ್ಲರಿಗೂ ತುಂಬಾ ಹತ್ತಿರವಾಗಿದ್ದರು. ಅವರ ತಾಳ್ಮೆ, ಸಮಸ್ಯೆಗಳನ್ನು ನಿಭಾಯಿಸುವ ರೀತಿ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಅವರ ಅಗಲಿಕೆಯಿಂದ ಪಕ್ಷಕ್ಕೆ, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗದ್ಗದಿತ ಧ್ವನಿಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದರು.
ಜಟಿಲವಾಗಿದ್ದ ಜಿಎಸ್ಟಿಯನ್ನು ಅತ್ಯಂತ ಸರಳವಾಗಿ ಅಳವಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೆಳ ಹಂತದ ಕಾರ್ಯಕರ್ತರನ್ನು ಬೆಳೆಸುವಲ್ಲಿ ಅವರು ಕಳಕಳಿವಹಿಸಿದ್ದರು ಎಂದು ಹೇಳಿದರು.
ಸಾವಿನಿಂದ ಗೆದ್ದು ಬರುತ್ತಾರೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಇಂದು ವಿಧಿವಶರಾಗಿದ್ದಾರೆ. ನಮ್ಮೊಂದಿಗಿನ ಅವರ ಆತ್ಮೀಯ ಸಂಬಂಧ ಮರೆಯಲಾಗದು. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಿಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಮತ್ತೊಂದೆಡೆ ಸಚಿವ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಅರುಣ್ ಜೇಟ್ಲಿಯವರ ನಿಧನಿಂದ ಕೇವಲ ಬಿಜೆಪಿ ಅಷ್ಟೇ ಅಲ್ಲಾ. ಇಡೀ ದೇಶಕ್ಕೆ ನಷ್ಟವಾಗಿದೆ. ಜಿಎಸ್ ಟಿ ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದವರು. ಅವರ ಕುಟುಂಬಕ್ಕೆ ಭಗವಂತ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಿಲ್ಲ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.