ಹುಬ್ಬಳ್ಳಿ : ಲಾಕ್ಡೌನ್ ಪರಿಸ್ಥಿತಿಯಲ್ಲಿ ರೋಗಿಗಳಿಗೆ ರಕ್ತವನ್ನು ಒದಗಿಸಲು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ಕೇಂದ್ರದಿಂದ ದಾನಿಗಳಿಗೆ ಸಹಾಯ ಕೋರಿ ಮನವಿ ಮಾಡಲಾಗಿದೆ.
ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಘೋಷಣೆಯಾಗಿದೆ. ಶಿಬಿರಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ರೋಗಿಗಳಿಗೆ ರಕ್ತ ಒದಗಿಸುವುದು ಕಷ್ಟವಾಗಿದೆ. ಬೇಡಿಕೆ ಹಾಗೂ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ಸರಿದೂಗಿಸಲು ರಾಷ್ಟ್ರೋತ್ಥಾನ ನಿಧಿಯು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ.
ಹಾಗಾಗಿ ದಾನಿಗಳಿಗೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿ ಅವರನ್ನು ಆ್ಯಂಬ್ಯುಲೆನ್ಸ್ ಹಾಗೂ ಇನ್ನಿತರ ವಾಹನದ ಮೂಲಕ ಕರೆತಂದು ರಕ್ತ ದಾನಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇಲ್ಲಿಯವರೆಗೆ ನಿಧಿಗೆ 685 ಜನರು ಬ್ಲಡ್ ಕೊಟ್ಟಿದ್ದಾರೆ.
ಮಹಾನಗರ ಪಾಲಿಕೆಯ ಭಾರತೀಯ ಜನತಾ ಪಕ್ಷದ ಮುಖಂಡರು ಕೂಡ ರಕ್ತದಾನ ಮಾಡಿರುವುದು ವಿಶೇಷವಾಗಿತ್ತು.