ETV Bharat / state

ಶಿಕ್ಷಣ ಇಲಾಖೆ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವೀಕಾರ

2006 ರಲ್ಲಿ ಕೆಎಎಸ್ ತೇರ್ಗಡೆಯಾದ ದೇಸಾಯಿ ಅವರು ಬೈಲಹೊಂಗಲ, ಸಿಂಧನೂರ ಹಾಗೂ ಚಿಕ್ಕೋಡಿ ತಾಲೂಕುಗಳ ತಹಶೀಲ್ದಾರರಾಗಿ ಸೇವೆಸಲ್ಲಿಸಿದ್ದಾರೆ..

ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿ ರಮೇಶ ದೇಸಾಯಿ ಅಧಿಕಾರ ಸ್ವೀಕಾರ

author img

By

Published : Feb 3, 2021, 8:50 PM IST

ಧಾರವಾಡ : ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ನೂತನ ಅಪರ ಆಯುಕ್ತರಾಗಿ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ರಮೇಶ ದೇಸಾಯಿ ಬುಧವಾರ ಅಧಿಕಾರ ವಹಿಸಿಕೊಂಡರು.

ಈ ಹುದ್ದೆಯಲ್ಲಿದ್ದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಅಧಿಕಾರ ಹಸ್ತಾಂತರಿಸಿ ನೂತನ ಹೆಚ್ಚುವರಿ ಆಯುಕ್ತರಿಗೆ ಶುಭ ಕೋರಿದರು. 2006 ರಲ್ಲಿ ಕೆಎಎಸ್ ತೇರ್ಗಡೆಯಾದ ದೇಸಾಯಿ ಅವರು ಬೈಲಹೊಂಗಲ, ಸಿಂಧನೂರ ಹಾಗೂ ಚಿಕ್ಕೋಡಿ ತಾಲೂಕುಗಳ ತಹಶೀಲ್ದಾರರಾಗಿ ಸೇವೆಸಲ್ಲಿಸಿದ್ದಾರೆ.

ಓದಿ: ಲಂಡನ್​ನ ಫ್ಯಾಷನ್ ಸ್ಕೌಟ್​ನಲ್ಲಿ ಹುಬ್ಬಳ್ಳಿ ಹುಡುಗಿಯ ಡಿಸೈನ್​ಗೆ ಒಲಿದ ಪ್ರಶಸ್ತಿ!!

ಅಸಿಸ್ಟಂಟ್ ಕಮೀಷನರ್(ಎಸಿ) ಹುದ್ದೆಯ ವೃಂದಕ್ಕೆ ಪದೋನ್ನತಿ ಹೊಂದಿದ ಇವರು, ಗದಗ ಉಪವಿಭಾಗಾಧಿಕಾರಿಯಾಗಿ, ಗದಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ, ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಯೋಜನಾ ನಿರ್ದೇಶಕರಾಗಿ, ಹುಬ್ಬಳ್ಳಿ ವಿದ್ಯುಚ್ಛಕ್ತಿ ಪ್ರಸರಣ ನಿಗಮದ (ಹೆಸ್ಕಾಂ) ಪ್ರಧಾನ ವ್ಯವಸ್ಥಾಪಕರಾಗಿ ಸೇವೆಸಲ್ಲಿಸಿದ್ದಾರೆ. ನಿಕಟಪೂರ್ವದಲ್ಲಿ ಹಾವೇರಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.