ಹುಬ್ಬಳ್ಳಿ: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಜೊತೆ ಸಂಪರ್ಕ ಹೊಂದಿದ್ದ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗಿರೀಶ್ ಗದಿಗೆಪ್ಪಗೌಡ ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ನಟಿ ರಾಗಿಣಿ ಕೈಯಿಂದ ಕ್ಯಾಸಿನೋ ಓಪನಿಂಗ್ ಮಾಡಿಸಿದ್ದರು. ಇದೇ ಮಾರ್ಚ್ನಲ್ಲಿ ಪಣಜಿಯಲ್ಲಿರುವ ಕಾಡಿಲಾಕ್ ಕ್ಯಾಸಿನೋ ಉದ್ಘಾಡಿಸಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡನನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಡ್ರಗ್ಸ್ ಲಿಂಕ್ ಆರೋಪದಡಿ ನಟಿ ರಾಗಿಣಿ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಕ್ಯಾಸಿನೋ ಓಪನಿಂಗ್ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲಿಟ್ ಮಾಡಲಾಗಿತ್ತು. ಆದರೆ ರಾಗಿಣಿ ಜೊತೆ ಕಾಣಿಸಿಕೊಂಡ ಗಿರೀಶ್ ಗದಿಗೆಪ್ಪಗೌಡ ಅವರ ವಿಡಿಯೋ ಈಗ ಲಭ್ಯವಾಗಿದೆ.
ಕ್ಯಾಸಿನೋ ಉದ್ಘಾಟನೆಗೆ ಆಗಮಿಸಿದ್ದ ನಟಿ ರಾಗಿಣಿ ಜೊತೆಗಿನ ವಿಡಿಯೋ ತುಣುಕುಗಳು ಈಟಿವಿ ಭಾರತಕ್ಕೆ ಲಭ್ಯವಾಗಿವೆ.