ಧಾರವಾಡ: ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಗೆ ಅಪರೂಪದ ಅತಿಥಿಯೊಂದರ ಆಗಮನವಾಗಿತ್ತು. ಇದನ್ನು ನೋಡಿದ ಜನ ಒಂದು ಕ್ಷಣ ಹೌಹಾರಿದರು. ಅಷ್ಟಕ್ಕೂ ಜನರಲ್ಲಿ ಕುತೂಹಲ ಮೂಡಿಸಿದ ಆ ಅತಿಥಿ ಯಾರು ಅಂದ್ರೆ ಅದು ಪುನುಗು ಬೆಕ್ಕು.
ಇಂದು ಬೆಳ್ಳಂ ಬೆಳಗ್ಗೆ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷಗೊಂಡ ಪುನುಗು ಬೆಕ್ಕು, ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕಚೇರಿ ಆವರಣದಲ್ಲೇ ಅತ್ತಿಂದಿತ್ತ ಓಡಾಡುತ್ತಿತ್ತು. ಕಚೇರಿಗೆ ಆಗಮಿಸಿದ ಜನರು ಈ ಅಪರೂಪದ ಅತಿಥಿಯನ್ನು ನೋಡಿ ಕಣ್ತುಂಬಿಕೊಂಡರು. ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಯಲ್ಲಪ್ಪ ಪುನುಗು ಬೆಕ್ಕನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.