ETV Bharat / state

ಹಕ್ಕಿ ಜ್ವರದ ಭಯ ಬೇಡ, ಮುಂಜಾಗ್ರತೆ ಇರಲಿ: ಧಾರವಾಡ ಡಿಸಿ

ಸಾರ್ವಜನಿಕರಲ್ಲಿ ಹಕ್ಕಿ ಜ್ವರದ ಬಗ್ಗೆ ಭಯ ಬೇಡ. ಮುಂಜಾಗ್ರತೆ ಇರಲಿ. ಕೋಳಿ, ಮಾಂಸ, ಮೊಟ್ಟೆ ಬಳಸುವವರು ಬೇಯಿಸಿ ತಿನ್ನಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಜನರಲ್ಲಿ ಮನವಿ ಮಾಡಿದ್ದಾರೆ. ಪಾಟೀಲ ತಿಳಿಸಿದರು.

Dharwad
ಜಿಲ್ಲಾ ಪ್ರಾಣಿಜನ್ಯ ರೋಗಗಳ ನಿರ್ವಹಣಾ ಸಮಿತಿ ಸಭೆ
author img

By

Published : Jan 13, 2021, 6:50 AM IST

ಧಾರವಾಡ: ಹಕ್ಕಿ ಜ್ವರದ ಕುರಿತು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೂ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳ ಅನ್ವಯ ಅಗತ್ಯ ಪಶು ವೈದ್ಯಕೀಯ ತಂಡಗಳನ್ನು ರಚಿಸಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಭಯ ಪಡದೇ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ರೋಗದ ನಿಯಂತ್ರಣ ಕುರಿತು ಜಿಲ್ಲಾ ಪ್ರಾಣಿಜನ್ಯ ರೋಗಗಳ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ತಾಲೂಕಿಗೆ ಅನ್ವಯವಾಗುವಂತೆ ಪಶುವೈದ್ಯಾಧಿಕಾರಿ, ವೈದ್ಯಕೀಯ ಸಹಾಯಕ ಮತ್ತು ಸಹಾಯಕರು ಸೇರಿ ಒಟ್ಟು 5 ಜನ ಸದಸ್ಯರಿರುವ 50 ತಂಡಗಳನ್ನು ರಚಿಸಿ, ಅಗತ್ಯ ತರಬೇತಿ ನೀಡಿ ಹಕ್ಕಿಜ್ವರ ನಿಯಂತ್ರಣಕ್ಕೆ ಸಿದ್ಧಗೊಳಿಸಲಾಗಿದೆ ಎಂದರು.

Dharwad
ಜಿಲ್ಲಾ ಪ್ರಾಣಿಜನ್ಯ ರೋಗಗಳ ನಿರ್ವಹಣಾ ಸಮಿತಿ ಸಭೆ

ಜಿಲ್ಲೆಯ ಯಾವುದೇ ಕಾಡು, ಹೊಲ, ಗದ್ದೆ, ಹಳ್ಳ, ಕೆರೆ, ಕೊಳ್ಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಕ್ಕಿ, ಪಕ್ಷಿಗಳು ಅಥವಾ ಜವಾರಿ ಕೋಳಿ ಇದ್ದಕ್ಕಿದ್ದಂತೆ ಸಾವು ಅಥವಾ ಆಕಸ್ಮಿಕ ಸಾವು ಕಂಡು ಬಂದರೆ ತಕ್ಷಣ ಹತ್ತಿರದ ಪಶು ಆಸ್ಪತ್ರೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು ಮತ್ತು ಸುರಕ್ಷತಾ ಸಾಧನಗಳಿಲ್ಲದೇ ಅವುಗಳ ಸಮೀಪಕ್ಕೆ ಹೋಗಬಾರದು ಎಂದು ಅವರು ಸಾರ್ವಜನಿಕರಿಗೆ ಸೂಚನೆ ನೀಡಿದರು.

ಕೋಳಿ, ಮಾಂಸ, ಮೊಟ್ಟೆ ಮುಂತಾದವುಗಳನ್ನು ಬಳಸುವವರು ಬೇಯಿಸಿ ತಿನ್ನಬೇಕು. ಇವುಗಳಿಂದ ಮಾನವರಿಗೆ ಹಕ್ಕಿಜ್ವರ ಬರುವುದಿಲ್ಲ. ಕೋಳಿ ಮತ್ತು ಮಾಂಸ ಮಾರಾಟಗಾರರು, ಕಸಾಯಿಖಾನೆಯಲ್ಲಿ ಕೆಲಸ ಮಾಡುವವರು, ಕೋಳಿ ಫಾರಂನಲ್ಲಿ ಕೆಲಸ ಮಾಡುವವರು ಎನ್-95 ಮಾಸ್ಕ್, ಹ್ಯಾಂಡ್‍ಗ್ಲೌಸ್, ಗಮ್‍ಬೂಟ್‍ಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಇದೇ ವೇಳೆ ಅವರು ಸೂಚನೆ ನೀಡಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಪರಮೇಶ್ವರ ನಾಯ್ಕ ಹಕ್ಕಿ ಜ್ವರದ ಗುಣಲಕ್ಷಣಗಳು ಮತ್ತು ಅವುಗಳ ಪರೀಕ್ಷೆ, ಚಿಕಿತ್ಸೆ ಮತ್ತು ಹಕ್ಕಿ ಜ್ವರ ರೋಗದ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕೈಗೊಂಡ ಪೂರ್ವಸಿದ್ಧತೆಗಳು ಹಾಗೂ ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತೆ ಕುರಿತು ಸಭೆಯಲ್ಲಿ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.