ಹುಬ್ಬಳ್ಳಿ: ಗುಟ್ಕಾ ಹಾಕಿಕೊಂಡು ಬಂದ ವ್ಯಕ್ತಿಗೆ ಡಿಸಿಪಿ ರಾಮರಾಜನ್ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹುಬ್ಬಳ್ಳಿ ಉಪನಗರ ಠಾಣೆಯ ಪಿಎಸ್ಐವೊಬ್ಬರು ಆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ನಗರದಲ್ಲಿಂದು ಬಂದೋಬಸ್ತ್ ವೇಳೆಯಲ್ಲಿ ಸ್ವತಃ ಡಿಸಿಪಿ ರಾಮರಾಜನ್, ಗುಟ್ಕಾ ಹಾಕಿಕೊಂಡು ಬಂದಿದ್ದ ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡು ಕಾನೂನು ಕ್ರಮ ಕೈಗೊಂಡಿದ್ದರು. ಆದರೆ, ಪಕ್ಕದಲ್ಲಿದ್ದ ಪಿಎಸ್ಐ ಸೀತಾರಾಮ, ಕೆಟ್ಟ ಪದ ಬಳಕೆ ಮಾಡಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆಯಿದ್ದರೂ ಸಹ ಪಿಎಸ್ಐ ಅವಾಚ್ಯ ಪದ ಬಳಸಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ: ಅಂಗಡಿ ಬಂದ್ ವೇಳೆ ಪೊಲೀಸರು-ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ