ಹುಬ್ಬಳ್ಳಿ: ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮಧ್ಯಂತರ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಪೂರ್ಣಗೊಳಿಸದೇ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿದ್ದನ್ನು ಖಂಡಿಸಿ ಎನ್ಎಸ್ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನವನಗರದ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪರೀಕ್ಷಾ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಕಾರಣಕ್ಕೆ ಯಾವುದೇ ಕ್ಲಾಸ್ಗಳು ನಡೆದಿಲ್ಲ. ಕಳೆದ 5 ತಿಂಗಳಿಂದ ಲೈಬ್ರರಿ ಓಪನ್ ಇರದ ಕಾರಣಕ್ಕೆ ಪ್ರಾಕ್ಟಿಕಲ್ ಸಹ ನಡೆದಿಲ್ಲ. ಇದರ ಮಧ್ಯೆ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿದರು.