ಕಲಘಟಗಿ (ಧಾರವಾಡ): ಕೋವಿಡ್-19 ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ 7ನೇ ದಿನವೂ ಮುಂದುವರೆದ್ದು, ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕಿನ ಗಳಗಿಹುಲಕೊಪ್ಪ,ಗಂಜಿಗಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎದರು ಪ್ರತಿಭಟಿಸಿ, ಪ್ರತಿ ತಿಂಗಳ ಗೌರವಧನ ರೂ.12 ಸಾವಿರ ಹೆಚ್ಚಳ ಮಾಡಬೇಕು ಹಾಗೂ ಕೋವಿಡ್-19 ಸೇವೆ ಸಲ್ಲಿಸಲು ಅಗತ್ಯವಿರುವ ಸಂರಕ್ಷಣಾ ಸಾಮಗ್ರಿ ವಿತರಿಸಬೇಕು ಎಂದು ಆಗ್ರಹಿಸಿದರು. ಮಹಾದೇವಿ ಕಬ್ಬೂರ್, ಕಸ್ತೂರಿ, ಮಂಜುಳಾ ಭಜಂತ್ರಿ, ಲಕ್ಷ್ಮಿ ಕಡ್ಲೆಸ್ಕರ, ಶಾಂತ ಬಡಿಗೇರ ಇದ್ದರು.