ETV Bharat / state

ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ - ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡುವಂತೆ ಪ್ರತಿಭಟನೆ

ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಬಾಬ್ರಿ ‌ಮಸೀದಿ ಕಟ್ಟದೇ ಆ ಸ್ಥಳದಲ್ಲಿ ಬೌದ್ಧ ವಿಹಾರ ಕಟ್ಟುವಂತೆ ಆಗ್ರಹಿಸಿ ಅಂಬೇಡ್ಕರ್ ಹಿತಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Ayodhya
ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡುವಂತೆ ಪ್ರತಿಭಟನೆ
author img

By

Published : Jun 4, 2020, 4:02 PM IST

ಧಾರವಾಡ: ಅಯೋಧ್ಯೆಯ ರಾಮಮಂದಿರ ಸ್ಥಳವು ಬುದ್ಧನಿಗೆ ಸೇರಿದ್ದು ಎಂದು ಅಂಬೇಡ್ಕರ್ ಹಿತಾಭಿವೃದ್ಧಿ ಸಂಘ ಹೇಳಿದೆ. ಅಲ್ಲದೆ, ಆ ಸ್ಥಳದಲ್ಲಿ ಬುದ್ಧ ವಿಹಾರ ನಿರ್ಮಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಅಯೋಧ್ಯೆಯಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡುವಂತೆ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಬೇಡ್ಕರ್ ಲಿಡ್ಕರ್​ ಹಿತಾಭಿವೃದ್ಧಿ ಸಂಘಟನೆ ಕಾರ್ಯಕರ್ತರು ಅಯೋಧ್ಯೆ ಸ್ಥಳವು ರಾಮ ಮತ್ತು ಬಾಬರ್ ಇಬ್ಬರಿಗೂ ಸೇರಿದ್ದಲ್ಲ, ಅದು ಬುದ್ಧನ ವಿಹಾರಕ್ಕೆ ಸೇರಿದೆ. ಅಲ್ಲದೆ ಅಲ್ಲಿ ಬುದ್ಧನ ವಿಗ್ರಹಗಳು ಸಹ ಸಿಕ್ಕಿದ್ದು, ಆ ಜಾಗವನ್ನ ಬೌದ್ಧರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಸಂದರ್ಭದಲ್ಲಿ ಅಲ್ಲಿ ಬುದ್ಧನ ಮೂರ್ತಿ ಪತ್ತೆಯಾಗಿದೆ. ಈ ಸಂಬಂಧ ಭಾರತ ಸರ್ಕಾರದ ಅಧೀನದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು ಸೂಕ್ತ ದಾಖಲೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಬಾಬ್ರಿ ‌ಮಸೀದಿ ಕಟ್ಟದೇ ಆ ಸ್ಥಳವನ್ನು ಬೌದ್ಧ ವಿಹಾರ ಕಟ್ಟುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.