ಹುಬ್ಬಳ್ಳಿ : ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಯುವತಿಯರನ್ನು ಗೋಕುಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜುಲೈ 30 ರಂದು ನಗರದ ಅರ್ಬನ್ ಓಯಾಸಿಸ್ ಮಾಲ್ನಲ್ಲಿರುವ ಥೈ ದಿ ಫ್ಯಾಮ್ಲಿ ಸಲೂನ್ ಹಾಗೂ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಮಸಾಜ್ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿತ್ತು. ಸ್ಪಾ ಮಾಲೀಕರು ಹಾಗೂ ಮೂವರು ವಿದೇಶಿ ಯುವತಿಯರನ್ನೂ ಪೊಲೀಸರು ರಕ್ಷಣೆ ಮಾಡಿದ್ರು.
ತನಿಖೆ ವೇಳೆ ಥೈಲ್ಯಾಂಡ್ ದೇಶದ ಮೂವರು ಯುವತಿಯರು ಟೂರಿಸ್ಟ್ ವೀಸಾ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವರ ಮೇಲೆ ಫಾರೆನರ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಥೈಲ್ಯಾಂಡ್ ದೇಶದ ಯಾರಿಂಡಾ ಚಾಟಮೊಂತ್ರಿ, ಸಾಂಗಡೌ ವಾಂಗಮೋಸೋ ಹಾಗೂ ಥಾಪಾನಿ ವಿಸೇಟ್ದಿ ಥಾನಪೊಂಗ ಎನ್ನುವ ಮೂವರು ಯುವತಿಯರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.