ETV Bharat / state

ಪಾಕ್​ ಪರ ಘೋಷಣೆ ಕೂಗಿದ್ದವರ ಬಿಡುಗಡೆಗೆ ಆಕ್ರೋಶ; ಶ್ರೀರಾಮಸೇನೆ ಪ್ರತಿಭಟನೆ - ಪಾಕ್​ ಪರ ಘೋಷಣೆ ಕೂಗಿದ್ದವರ ಬಿಡುಗಡೆ

ಪಾಕಿಸ್ತಾನದ ಪರ ಘೋಷಣೆ ಕೂಗಿ ಈಗ ಜಾಮೀನು ಪಡೆದು ಬಿಡುಗಡೆಯಾಗಿರುವ ಕಾಶ್ಮೀರಿ ಮೂಲದ ವಿದ್ಯಾರ್ಥಿಗಳ ಜಾಮೀನು ರದ್ದುಗೊಳಿಸಿ ಕೂಡಲೇ ಬಂಧಿಸಬೇಕು ಎಂದು ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

csdsd
ಶ್ರೀರಾಮಸೇನೆ ಪ್ರತಿಭಟನೆ
author img

By

Published : Jun 12, 2020, 9:23 PM IST

ಧಾರವಾಡ: ಕಾಶ್ಮೀರಿ ಮೂಲದ ವಿದ್ಯಾರ್ಥಿಗಳು ಪಾಕ್​ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ತನಿಖಾಧಿಕಾರಿ ಕರ್ತವ್ಯಲೋಪ ಎಸಗಿ ಆರೋಪಗಳಿಗೆ ಜಾಮೀನು ಸಿಗಲು ಸಹಕರಿಸಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶ್ರೀರಾಮಸೇನೆ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು, ತನಿಖಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಮರು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಹುಬ್ಬಳ್ಳಿ ಗ್ರಾಮೀಣ ಪಿಎಸ್ಐ ಜಾಕ್ಸನ್ ಡಿಸೋಜಾ ಹಾಗೂ ಅವರ ತಂಡಕ್ಕೆ ವಹಿಸಲಾಗಿತ್ತು. ಆದರೆ ಇವರು ಸಮಯಕ್ಕೆ ಸರಿಯಾಗಿ ತನಿಖೆ ಮುಗಿಸದೆ ಸೂಕ್ತ ಸಾಕ್ಷ್ಯಾಧಾರಗಳಿದ್ದರೂ ಹಾಜರುಪಡಿಸದೆ ಆರೋಪಿಗಳಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ತನಿಖಾ ತಂಡದ ವಿರುದ್ಧ ದೇಶದ್ರೋಹದ ಮೊಕದ್ದಮೆ ಹಾಕಿ ಷಡ್ಯಂತ್ರದ ಹಿಂದಿರುವವರನ್ನು ಬಹಿರಂಗಪಡಿಸಬೇಕು. ಆರೋಪಿಗಳು ಸಾಕ್ಷಿ ನಾಶಪಡಿಸುವ ಮತ್ತು ತನಿಖೆ ಮೇಲೆ ಪ್ರಭಾವ ಬೀರುವ ಲಕ್ಷಣಗಳಿದ್ದು, ಜಾಮೀನು ರದ್ದುಗೊಳಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.