ETV Bharat / state

ಜೀವದ ಹಂಗು ತೊರೆದು 345 ಪ್ರಯಾಣಿಕರ ರಕ್ಷಣೆ: ಸಿಬ್ಬಂದಿ ಕಾರ್ಯಕ್ಕೆ ನೈರುತ್ಯ ರೈಲ್ವೆಯಿಂದ ಬಹುಮಾನ ಘೋಷಣೆ - ರೈಲು ಅಪಘಾತ

ಪ್ರಯಾಣಿಕರನ್ನು ಸುರಕ್ಷಿತ ಬೋಗಿಗಳಿಗೆ ಸ್ಥಳಾಂತರಿಸಿ ರೈಲು ಮರಳಿ ಕುಲೇಮ್​ಗೆ ಕಳುಹಿಸುವ ಮೂಲಕ ಧೈರ್ಯ ಮತ್ತು ಸಮಯ ಪ್ರಜ್ಞೆ ತೋರಿದ ರೈಲಿನ ಚಾಲಕ ಸಿಬ್ಬಂದಿಗೆ (ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್, ಗಾರ್ಡ್) ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯರವರು ಪ್ರೋತ್ಸಾಹದ ರೂಪದಲ್ಲಿ ನಗದು ಬಹುಮಾನ ಘೋಷಿಸಿದ್ದಾರೆ.

ಬಹುಮಾನ ಘೋಷಣೆ
ಬಹುಮಾನ ಘೋಷಣೆ
author img

By

Published : Jul 26, 2021, 11:17 AM IST

ಹುಬ್ಬಳ್ಳಿ: ಜೀವದ ಹಂಗು ತೊರೆದು ಜಾಗರೂಕತೆಯಿಂದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಮೂವರು ರೈಲ್ವೆ ಚಾಲಕರ ಕಾರ್ಯವನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರು ಶ್ಲಾಘಿಸಿದ್ದಾರೆ. ಅವರ ಕಾರ್ಯವನ್ನು ಗುರುತಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬಯಿ ರೈಲಿನ ಲೋಕೋ ಪೈಲಟ್, ಸಹಾಯಕ ಲೋಕೋ ಪೈಲಟ್ ಮತ್ತು ಗಾರ್ಡ್​ಗಳ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.

ನಿಯಂತ್ರಣ ಕಚೇರಿಗೆ ಮಾಹಿತಿ ರವಾನೆ:

ಜುಲೈ 23 ರಂದು ಬೆಳಗ್ಗೆ ಸುಮಾರು 6.10 ಕ್ಕೆ ಕುಲೇಮ್ ನಿಂದ ಕ್ಯಾಸೆಲ್ ರಾಕ್ ಕಡೆಗೆ ಈ ರೈಲು ಬರುತ್ತಿರುವಾಗ ದೂಧ್ಸಾಗರ್- ಸೋನಾಲಿಮ್ ಭಾಗದ ಕಿ.ಮೀ. ಸಂಖ್ಯೆ 39/800 ರ ಬಳಿ ಲೋಕೋ ಪೈಲಟ್ ರಣ್ ಜಿತ್ ಕುಮಾರ್ ಅವರು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟ್ರ್ಯಾಕ್ ಮೇಲೆ ಬೆಟ್ಟದ ಮಣ್ಣು ಜಾರಿ ಬೀಳುತ್ತಿರುವುದನ್ನು ಗಮನಿಸಿದ್ದಾರೆ.

ಮುಂದೆ ಉಂಟಾಗಬಹುದಾದ ಅಪಾಯವನ್ನು ಅರಿತು ಕೂಡಲೇ ತುರ್ತು ಬ್ರೇಕ್ ಪ್ರಯೋಗಿಸಿ ರೈಲನ್ನು ನಿಲ್ಲಿಸಿದರು. ಟ್ರ್ಯಾಕ್ ಮೇಲೆ ಕೆಸರು ಮಿಶ್ರಿತ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದ್ದರೂ ಕೂಡ ಗಾಲಿಗಳ ಸಮೇತವಾಗಿ ಇಂಜಿನ್ ಹಳಿ ತಪ್ಪಿತು. ಈ ಕುರಿತು ಕೂಡಲೇ ದೂಧ್ಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್​ಗೆ ವಿಷಯ ತಿಳಿಸಿ, ಹುಬ್ಬಳ್ಳಿಯ ನಿಯಂತ್ರಣ ಕಚೇರಿಗೆ ಮಾಹಿತಿ ನೀಡುವಂತೆ ಹೇಳಿದರು.

ತುರ್ತು ಬ್ರೇಕ್ ಪ್ರಯೋಗವಾಗುತ್ತಿರುವುದನ್ನು ಗಮನಿಸಿದ ರೈಲಿನ ಗಾರ್ಡ್ ಶೈಲೇಂದರ್ ಕುಮಾರ್ ಅವರು, ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್ ನ ಹ್ಯಾಂಡ್ ಬ್ರೇಕ್ ಅನ್ನು ಪ್ರಯೋಗಿಸಿ ಇಂಜಿನ್​​ನ ಹತ್ತಿರ ಹೋದರು.

ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋ ಪೈಲಟ್​ಗಳು ಮುಂದಿನ ಮತ್ತು ಹಿಂಭಾಗದ (Banker) ಇಂಜಿನ್​ಗಳ ಸಹಾಯಕ ಲೋಕೋ ಪೈಲಟ್​ಗಳಿಗೆ ಟ್ರ್ಯಾಕ್ ನ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್​ಗಳನ್ನು ಇಡುವಂತೆ ಸೂಚಿಸಿದರು. ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದರು, ವ್ಹೀಲ್ ಸ್ಕಿಡ್​ಗಳನ್ನು ಇರಿಸಿ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರು.

345 ಪ್ರಯಾಣಿಕರ ರಕ್ಷಣೆ:

ಸುರಕ್ಷತೆಗಾಗಿ ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿ, ಈ ಮೂರು ಬೋಗಿಗಳನ್ನು ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದರು. ಎಚ್ಚರಿಕೆ ಮತ್ತು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ, ಹುಬ್ಬಳ್ಳಿ ವಿಭಾಗ ನಿಯಂತ್ರಣ ಕಾರ್ಯಾಲಯದ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸಿದರು. ಹಿಂಭಾಗದಲ್ಲಿ ಅಳವಡಿಸಲಾಗಿದ್ದ (ಬ್ಯಾಂಕಿಂಗ್) ಇಂಜಿನ್​ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಮರಳಿ ಕಳುಹಿಸಿದರು.

ಗಾರ್ಡ್ ಶೈಲೇಂದರ್ ಕುಮಾರ್ ಅವರು, ಲೋಕೋ ಪೈಲಟ್ ಎಸ್.ಡಿ. ಮೀನಾ, ಸಹಾಯಕ ಲೋಕೋ ಪೈಲಟ್ ಎಸ್.ಕೆ. ಸೈನಿಯವರೊಂದಿಗೆ ಪ್ರಯಾಣಿಕರಿದ್ದ ರೈಲನ್ನು ಸುರಕ್ಷಿತವಾಗಿ ಕುಲೇಮ್​ಗೆ ಕೊಂಡೊಯ್ದರು. ರಣ್ಜೀತ್ ಕುಮಾರ್ ಮತ್ತು ಹಶೀದ್ ಕೆ. ಅವರು ಹಳಿ ತಪ್ಪಿದ ಇಂಜಿನ್​ ಬಳಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಉಳಿದುಕೊಂಡರು.

ಘಾಟ್ ಸೆಕ್ಷನ್ ಮಾಹಿತಿ:

ಕ್ಯಾಸೆಲ್ ರಾಕ್- ಕುಲೇಮ್ ಘಟ್ಟ ಪ್ರದೇಶದ ಮಾರ್ಗವು 27 ಕಿ.ಮೀ. ಉದ್ದವಿದ್ದು, ಪಶ್ಚಿಮ ಘಟ್ಟದ ಜನ ವಸತಿ ರಹಿತ ಕಾಡಿನ ಮೂಲಕ ಸಾಗುವ ಏಕಪಥ ಮಾರ್ಗವಾಗಿದೆ. ಇಡೀ ಘಟ್ಟದ ಮಾರ್ಗವು ಕಡಿದಾದ ಇಳಿಜಾರನ್ನು (37 ರಲ್ಲಿ 1 ಗ್ರೆಡಿಎಂಟ್/gradient) ಹೊಂದಿದ್ದು, ಮುಂಭಾಗದ ಜೊತೆಗೆ ರೈಲಿಗೆ ಹಿಂಭಾಗದಲ್ಲೂ ಇಂಜಿನ್ ಅಳವಡಿಸುವ ಮೂಲಕ ಹೆಚ್ಚಿನ ಶಕ್ತಿಯನ್ನು (horsepower) ಒದಗಿಸಲಾಗುತ್ತದೆ.

ಕ್ಯಾಸೆಲ್ ರಾಕ್ ಮತ್ತು ಕುಲೇಮ್ ನಡುವೆ ಇರುವ ನಿಲ್ದಾಣಗಳಾದ ಕಾರಂಜೋಲ್, ದೂಧ್ ಸಾಗರ್ ಮತ್ತು ಸೋನಾಲಿಮ್ ಗಳನ್ನು ಕೇವಲ ರೈಲು ಮಾರ್ಗದ ಮೂಲಕ ತಲುಪಬಹುದಾಗಿದ್ದು, ರಸ್ತೆ ಸಂಪರ್ಕವಿಲ್ಲ. ಜು. 22 ಮತ್ತು 23 ರಂದು ಈ ಭಾಗದಲ್ಲಿ 48 ಗಂಟೆಗಳ ಅವಧಿಯಲ್ಲಿ 640 ಮಿ.ಮೀ. ಮಳೆಯಾಗಿದ್ದು, ಭೂ ಕುಸಿತ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.